ಬಂಟ್ವಾಳ: ಶಿವಮೊಗ್ಗದಲ್ಲಿ ಕಳೆದ ವಾರ ನಡೆದ ಮತೀಯ ಹಿಂಸಾಚಾರ ಘಟನೆಗೆ ಸಂಬಂಧಿಸಿ ಬಂಟ್ವಾಳ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಕಾರ್ಯಕರ್ತರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಕ್ಯಾಮಾರಾ ದೃಶ್ಯಾವಳಿಯ ಆಧಾ ರದಲ್ಲಿ ರ್ಯಾಲಿಯಲ್ಲಿ ಪಾಲ್ಗೊಂಡ ಪ್ರಮುಖ ಕಾರ್ಯಕರ್ತರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

shimogga1
ಮಂಗಳೂರು, ಬಂಟ್ವಾಳ-ಕೆಳಗಿನಪೇಟೆ, ಫರಂಗಿಪೇಟೆ ಮತ್ತಿತರ ಕಡೆಗಳಿಂದ ಸಂಘಟಕರನ್ನು ಮಂಗಳ ವಾರ ಸಂಜೆ ಹಾಗೂ ರಾತ್ರಿ ವಶಪಡಿಸಿ ಕೊಳ್ಳಲಾಗಿದೆ. ಮಂಗಳವಾರ ಸಂಜೆ 7ರ ಸುಮಾರಿಗೆ ಬಿ.ಸಿ.ರೋಡ್, ಕೈಕುಂಜೆ ರೈಲ್ವೇ ನಿಲ್ದಾಣ ವಠಾರದಲ್ಲಿ ಕಾರ್ಯಾಚರಣೆ ನಡೆಸಿದ ಶಿವಮೊಗ್ಗ ಪೊಲೀಸರು ಬಂಟ್ವಾಳದ ಕೆಳಗಿನ ಪೇಟೆಯ ಇಬ್ಬರನ್ನು ವಶಪಡಿಸಿದ್ದಾರೆ. ಸ್ವಲ್ಪಹೊತ್ತಿನಲ್ಲಿ ಫರಂಗಿಪೇಟೆಯ ಪರಿಸರದಿಂದ ಐವರನ್ನು ವಶಪಡಿಸಿ ಕೊಂಡರು. ಉಳಿದ ನಾಲ್ವರನ್ನು ಮಂಗಳೂರು ಆಸುಪಾಸಿನಿಂದ ವಶ ಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಮಾಹಿತಿ ಪ್ರಕಾರ ಈಗಾಗಲೇ 11 ಮಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ವಿಚಾರಣೆ ಬಳಿಕ ಬಂಧಿಸಲಾಗುತ್ತದೆ ಎನ್ನಲಾಗಿದೆ. ಶಿವಮೊಗ್ಗ ಪೊಲೀಸರ ದಿಢೀರ್ ಕಾರ್ಯಾಚರಣೆಯಿಂದಾಗಿ ಆತಂಕಗೊಂಡ ಕೆಲವೊಂದು ಕಾರ್ಯ ಕರ್ತರು ಪೊಲೀಸರ ಕೈಯಿಂದ ತಪ್ಪಿಸಿ ಕೊಂಡಿದ್ದಾರೆ ಎಂದು ತಿಳಿದುಬಂದಿದೆ.

By suddi9

Leave a Reply

Your email address will not be published. Required fields are marked *