ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಹಾಗೂ ಪರಿಸರದಲ್ಲಿ ಬುಧವಾರ ಬೆಳಗ್ಗೆ ಲಘು ಭೂಕಂಪನವಾಗಿದ್ದು ಭಾರೀ ಆತಂಕಕ್ಕೆ ಕಾರಣವಾಗದಿದೆ.

ನಿನ್ನೆ ಬೆಳಗ್ಗೆ 6.56ರ ವೇಳೆ ಸುಮಾರು ಐದಾರು ಸೆಕೆಂಡುಗಳ ಕಾಲ ಮನೆಯೊಳಗಿದ್ದವರಿಗೆ ಭೂಕಂಪನದ ಅರಿವಾಗಿದೆ. ಕೆಲವು ಮನೆಗಳಲ್ಲಿ ಭೂಕಂಪದಿಂದ ಪಾತ್ರೆಗಳು ಅಲುಗಾಡಿದರೆ, ಇನ್ನೂ ಕೆಲವೆಡೆ ಮನೆಗಳ ಕಿಟಕಿ ಬಾಗಿಲುಗಳು ಕಂಪಿಸಿವೆ. ಕುರ್ಚಿಯಲ್ಲಿ ಕುಳಿತವರು ಹಾಗೂ ಮಂಚದಲ್ಲಿ ಮಲಗಿದವರಿಗೆ ಸ್ವಲ್ಪ ನೆಲ ಹಾಗೂ ದೇಹವು ಅಲುಗಾಡಿದ ಅನು’ವವಾಗಿದೆ. ಸ್ವಲ್ಪ ಸಮಯ ಮಾತ್ರ ಭೂಮಿ ಕಂಪಿಸಿದ್ದರಿಂದ ಹೆಚ್ಚಿನ ಅನಾಹುತ ಆಗಿಲ್ಲ.

