ಗುಜರಾತಿನ ರಾಜ್ ಕೋಟ್ ನಲ್ಲಿ ಫೆ. 17 ರಿಂದ 22ರ ತನಕ SGFIಯವರು ಅಯೋಜಿಸಿದ ರಾಷ್ಟ್ರಮಟ್ಟದ ಶಾಲಾ ಮಕ್ಕಳ ಈಜು ಸ್ಪರ್ಧೆಯಲ್ಲಿ 14 ವರ್ಷ ವಯೋಮಿತಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಮನೋಹರ ಪ್ರಭುರವರು 1 ಚಿನ್ನ, 1 ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಇವರು 5೦ ಮೀ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಚಿನ್ನ, 1೦೦ ಮೀ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಬೆಳ್ಳಿ ಮತ್ತು 2೦೦ ಮೀ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಕಂಚಿನ ಪದಕಗಳನ್ನು ಗಳಿಸಿದ್ದಾರೆ.

ಇವರು ಮಂಗಳೂರು ಮಹಾನಗರಪಾಲಿಕೆಯ ಈಜುಕೊಳದಲ್ಲಿ ಜೈಹಿಂದ್ ಸ್ವಿಮ್ಮಿಂಗ್ ಕ್ಲಬ್ಬಿನ ಶ್ರೀ ರಾಮಕೃಷ್ಣ ರಾವ್, ಶ್ರೀ ಉಮೇಶ್, ಶ್ರೀ ಸಂಕೇತ್, ಶ್ರೀ ಸನ್ಮಿತ್, ಶ್ರೀ ರಾಜೇಶ್ ಮತ್ತು ಪುತ್ತೂರ್ ಅಕ್ವಾಟಿಕ್ ಕ್ಲಬ್ಬಿನ ಪಾರ್ಥ ವಾರಾಣಾಸಿಯವರಿಂದ ಈಜು ತರಬೇತಿಯನ್ನು ಪಡೆಯುತ್ತಿದ್ದು, ಸಂತ ಆಲೋಶಿಯಸ್ ಪ್ರೌಢ ಶಾಲೆ, ಕೊಡಿಯಾಲ್ ಬೈಲ್ ನಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಇವನು ಶ್ರೀ ಮಂಜುನಾಥ ಪ್ರಭು ಮತ್ತು ಶ್ರೀಮತಿ ಅರ್ಚನಾ ಪ್ರಭು ದಂಪತಿಗಳ ಸುಪುತ್ರನಾಗಿದ್ದಾನೆ.
