ಬಂಟ್ವಾಳ:ತಾಲ್ಲೂಕಿನ ಸಜಿಪಮೂಡ ನಿವಾಸಿ ಸೋಮಪ್ಪ ಎಂಬವರ ಪುತ್ರ 12ರ ಹರೆಯದ ಬಾಲಕ ಅನಿಲ್ ಎಂಬಾತನು ಮನೆಯಿಂದ ನಗದು ಸಹಿತ ನಾಪತ್ತೆಯಾಗಿರುವ ಘಟನೆ ನಡೆದಿದೆ. ಸ್ಥಳೀಯ ಸಕರ್ಾರಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿ ವಿದ್ಯಾಥರ್ಿಯಾಗಿರುವ ಅನಿಲ್ ಕಳೆದ ಮಂಗಳವಾರ ಬೆಳಿಗ್ಗೆ ಶಾಲೆಗೆ ಹೋಗದೆ ಮನೆಯಲ್ಲಿದ್ದ ರೂ 18ಸಾವಿರ ಮೊತ್ತದ ನಗದು ಸಹಿತ ನಾಪತ್ತೆಯಾಗಿದ್ದಾನೆ ಎಂದು ನಗರ ಪೊಲೀಸ್ ಠಾಣೆಗೆ ದೂರಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *