ಬಂಟ್ವಾಳ: ವಿ.ಸಿ.ಎನ್. ಬಾಯ್ಸ್ ಕಾರಾಜೆ ಇದರ ಆಶ್ರಯದಲ್ಲಿ ನಡೆದ 40ಗಜಗಳ 8ಜನರ ನಿಗದಿತ ಓವರ್ಗಳ ಅಹ್ವಾನಿತ 24 ತಂಡಗಳ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಡಿ.ಜೆ ಪ್ರೆಂಡ್ಸ್ ಅಲ್ಲಿಪಾದೆ 20ಸಾವಿರ ನಗದು ಮತ್ತು ಟ್ರೋಪಿಯನ್ನು ಪಡೆಯಿತು.
ದ್ವಿತೀಯ ಸ್ಥಾನವನ್ನು ಜೀಪಿ ಪ್ರೆಂಡ್ಸ್ ಗೂಡಿನಬಳಿ 10ಸಾವಿರ ನಗದು ಮತ್ತು ಟ್ರೋಫಿಯನ್ನು ಪಡೆಯಿತು. ಗ್ರಾ.ಪಂ.ಸದಸ್ಯ ಕರಿಂ ಬೊಳ್ಳಾಯಿ, ರೂಪೇಶ್ ಆಚಾರ್ಯ ಮಾರ್ನಬೈಲು, ಜಗದೀಶ ಪೂಜಾರಿ ಕಾರಾಜೆ ,ಸಚೀಂದ್ರ ಕೊಳಕೆ, ಪುರುಷೋತ್ತಮ ಪೂಜಾರಿ ಮತ್ತು ವಿ.ಸಿ.ಯನ್ ಬಾಯ್ಸ್ ಸದಸ್ಯರು ಉಪಸ್ಥಿತರಿದ್ದರು

