3

1 (3)

2 (1)

4 (2)

ಬಂಟ್ವಾಳ; ಬಿಜೆಪಿ ಪಕ್ಷದ ಸಿದ್ದಾಂತವನ್ನು ಒಪ್ಪದ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷದ ಹಲವು ನಾಯಕರು ಬಿಜೆಪಿಯ ಪ್ರಧಾನಮಂತ್ರಿ ಅಭ್ಯಥರ್ಿ ನರೇಂದ್ರ ಮೋದಿಯ ಆಕರ್ಷಣೆಗೆ ಒಳಗಾಗಿದ್ದಾರೆ, ಮೋದಿ ಪ್ರಧಾನಿಯಾಗಲಿ ಎಂಬ ಆಶಯವನ್ನಿರಿಸಿಕೊಂಡಿದ್ದಾರೆ ಎಂದು ಬಿಜೆಪಿ ವಕ್ತಾರ, ಮಾಜಿ ಸಚಿವ, ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಮಂಗಳವಾರ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣಿ ಹೇಗಿರಬೇಕು ಎನ್ನುವುದಕ್ಕೆ ಅಟಲ್ ಬಿಹಾರಿ ವಾಜಪೇಯಿ ಉತ್ತಮ ನಿದರ್ಶನ, ಅವರಷ್ಟೇ ಸಮರ್ಥ ಆಡಳಿತ ನೀಡಬಲ್ಲ ವ್ಯಕ್ತಿ ಗುಜರಾತ್ ನ ಮುಖ್ಯಮಂತ್ರಿ ನರೇಂದ್ರ ಮೋದಿ ಆಗಿದ್ದಾರೆ ಎಂದು ವಿಶ್ಲೇಷಿಸಿದರು. ಎಲ್ಲೆಡೆ ಮೋದಿ ಪರವಾದ ನಮೋ ಮಂತ್ರ ಕೇಳಿಬರುತ್ತಿದೆ, ಆದರೆ ನಮ್ಮ ಕಾರ್ಯಕರ್ತರು ನಮೋ ಮಂತ್ರ ಜಪಿಸುವ ಜೊತೆಗೆ ಬೂತ್ ಮಟ್ಟದಲ್ಲಿ ಬಿಜೆಪಿಯತ್ತ ಮತ ಸೆಳೆಯುವ ಕಾರ್ಯ ಮಾಡಬೇಕಿದೆ ಎಂದು ಕರೆ ಇತ್ತ ಅವರು ಕೇವಲ ಮಂತ್ರ ಪಠಿಸಿದರೆ ಮಾವಿನ ಕಾಯಿ ಉದುರುವುದಿಲ್ಲ ಎಂಬ ನಿದರ್ಶನ ನೀಡಿದರು.
ಕೇಂದ್ರದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲು 272 + ಸಂಖ್ಯೆಯ ಅವಶ್ಯಕತೆಯಿದೆ, ಇದರಲ್ಲಿ ದಕ್ಷಿಣ ಕನ್ನಡದ ಅಭ್ಯಥರ್ಿಯ ಗೆಲುವೂ ಅಗತ್ಯವಿದ್ದು, ಈದೆಸೆಯಲ್ಲಿ ಕಾರ್ಯಕರ್ತರು ವಿರಮಿಸದೆ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಮನವಿಮಾಡಿದರು.

ಕಾಂಗ್ರೇಸ್ ನಂಬಿದರೆ ದೇಶಕ್ಕೇ ಕ್ಯಾನ್ಸರ್..

ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಮಾತನಾಡಿ, ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ನ್ಯಾಯಾಲಯಕ್ಕೆ ಅಫಿದಾವಿತ್ ಸಲ್ಲಿಸಿ ರೈತರನ್ನು ಅವಮಾನಿಸಿದ ಕಾಂಗ್ರೇಸ್ ಅನ್ನು ನಂಬಿದರೆ, ಭವಿಷ್ಯದಲ್ಲಿ ದೇಶಕ್ಕೆ ಕಾಂಗ್ರೇಸ್ ತಗಲಿದರೂ ಅಚ್ಚರಿಯಿಲ್ಲ ಎಂದು ಲೇವಡಿಮಾಡಿದರು.
ಪುಗ್ಸಟ್ಟೆಯಾಗಿ ಅಧಿಕಾರ ಅನುಭವಿಸುವ ಕಾಂಗ್ರೇಸ್ಸಿಗರು, ತಾಕತ್ತಿದ್ದರೆ ಹಿಂದೂಗಳ ಮತ ಬೇಡ ಎಂದು ಘೋಷಿಸಲಿ ಎಂದು ಸವಾಲೆಸೆದ ಅವರು, ಶ್ರಮದ ಮೂಲಕ ಅಧಿಕಾರಕ್ಕೆ ಬರುವುದನ್ನು ಬಿಜೆಪಿಯಿಂದ ಕಲಿಯಲಿ ಎಂದರು. ಮೋದಿಯ ದೇಶ ಪ್ರೇಮ, ಅಭಿವೃದ್ದಿಯ ಇಚ್ಛಾಶಕ್ತಿಗೆ ನಮಸ್ಕಾರ ಹೇಳಬೇಕಾಗಿದೆ ಎಂದ ಅವರು, ಮೋದಿ ದೇಶವನ್ನು ಮುನ್ನಡೆಸಬಲ್ಲ ಪರಿಣಿತ ಪೈಲೈಟ್ ಆಗಿದ್ದು, ಸಮೃದ್ದ ,ಬಲಿಷ್ಠ ಭಾರತ ನಿಮರ್ಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂಬ ನಂಬಿಕೆಯಿದೆ ಎಂದರು. ಕಳೆದ ಹತ್ತುವರ್ಷಗಳ ಆಡಳಿತ ನಡೆಸಿದ ಕಾಂಗ್ರೇಸ್ ಗೆ ಒಬ್ಬ ಸಮರ್ಥ ನಾಯಕನನ್ನು ರೂಪಿಸುವಲ್ಲಿ ಟೀಕಿಸಿದ ಅವರು, ರಾಹುಲ್ ಗಾಂಧಿಯನ್ನು ದೇಶದ ಜನತೆ ಮಾತ್ರವಲ್ಲ, ಕಾಂಗ್ರೇಸ್ಸಿಗರೇ ತಿರಸ್ಕಾರ ಮಾಡಿದ್ದಾರೆ ಎಂದರು.
ಸಚಿವರಿಂದಲೇ ಅಡ್ಡಗಾಲು- ನಳಿನ್
ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ನಳಿನ್ ಕುಮಾರ್ ಮಾತನಾಡಿ, ನನ್ನ ಅವಧಿಯಲ್ಲಿ ಕೇಂದ್ರದಿಂದ ಎಷ್ಟು ಅನುದಾನ ತಂದಿದ್ದೀರಿ ಎಂದು ಪ್ರಶ್ನಿಸಿರುವ ಜಿಲ್ಲೆಯ ಉಸ್ತುವಾರಿ ಸಚಿವರೇ, ಅನೇಕ ಯೋಜನೆಗಳ ಪ್ರಸ್ತಾವನೆಗಳಿಗೆ ಅಡ್ಡಗಾಲು ಹಾಕಿದ್ದಾರೆ ಎಂದು ಆರೋಪಿಸಿದರು. ಅವರೊಬ್ಬ ಸಾಮಾನ್ಯ ಜ್ಞಾನವಿಲ್ಲದ ಸಚಿವರು ಎಂದು ಟೀಕಿಸಿದ ನಳಿನ್, ಕಳೆದ 5 ವರ್ಷಗಳ ಅವಧಿಯಲ್ಲಿ 1400 ಕೋಟಿ ಅನುದಾನ ದಲ್ಲಿ ಕ್ಷೇತ್ರದ ಅಭಿವೃದ್ದಿ ಕಾರ್ಯ ನಡೆಸಿದ್ದೇನೆ, ಸಾಧ್ಯವಾದಷ್ಟು ಮಟ್ಟಿಗೆ ಕಾರ್ಯಕರ್ತರ ಸಂಪರ್ಕದಲ್ಲಿರಿಸಕೊಂಡಿದ್ದೇನೆ ಎಂದರು.
ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಅಧ್ಯಕ್ಷತೆ ವಹಿಸಿ, ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಮಾರೋಪ ಭಾಷಣ ಮಾಡಿದರು.
ವೇದಿಕೆಯಲ್ಲಿ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ,ಯೋಗಿಶ್ ಭಟ್, ಕುಂಬ್ಳೆ ಸುಂದರ್ ರಾವ್, ಪದ್ಮನಾಭ ಕೊಟ್ಟಾರಿ, ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ ಭಟ್, ಪಕ್ಷದ ಪ್ರಮುಖರಾದ ರಾಜೇಶ್ ನಾಯ್ಕ್, ತುಂಗಪ್ಪ ಬಂಗೇರ, ನೇಮಿರಾಜ ರೈ, ದೇವದಾಸ ಶೆಟ್ಟಿ, , ಪುಷ್ಪಲತಾ ಗಟ್ಟಿ,ಜಿ.ಪಂ.ಸದಸ್ಯರಾದ ನಳಿನಿ ಶೆಟ್ಟಿ, ಜಯಶ್ರೀ ಪುದು, ದಿನೇಶ್ ಭಂಡಾರಿ, ಪುರುಷ ಎನ್.ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ ಸ್ವಾಗತಿಸಿದರು, ಪ್ರಧಾನಕಾರ್ಯದಶರ್ಿಗಳಾದ ದೇವಪ್ಪ ಪೂಜಾರಿ ವಂದಿಸಿದರು. ರಾಮದಾಸ್ ಕಾರ್ಯಕ್ರಮ ನಿರ್ವಹಿಸಿದರು.

ಬಂಟ್ವಾಳದಲ್ಲಿ ಬಡ್ಡಿಯೂ ಚಕ್ರಬಡ್ಡಿಯೂ ಬರಲಿ
ವೇದಿಕೆಯಲ್ಲಿ ಉಪಸ್ಥಿತರಿದ್ದ ಉಳಿಪಾಡಿಗುತ್ತು ರಾಜೇಶ್ ನಾಯಕ್ ರವರ 13 ದಿನಗಳ ಪಾದಯಾತ್ರೆಯನ್ನು ಉಲ್ಲೇಖಿಸಿ ಮಾತನಾಡಿದ, ಮಾಜಿ ಸಚಿವ ಸುರೇಶ್ ಕುಮಾರ್ ಹಾಗೂ ಮಾಜಿ ಸಂಸದೆ ತೇಜಸ್ವಿನಿ ಯವರು, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬ ಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿರಬಹುದು, ಆದರೆ ಅದನ್ನು ಲೆಕ್ಕಿಸದೆ ಇನ್ನೂ ಪಕ್ಷಕ್ಕಾಗಿ, ಕ್ಷೇತ್ರದ ಜನತೆಯ ಹಿತಕ್ಕಾಗಿ ರಾಜೇಶ್ ನಾಯಕ್ ಶ್ರಮಿಸುತ್ತಿದ್ದಾರೆ. ಕಳೆದ ಬಾರಿ ನಮ್ಮಿಂದ ಕಳೆದು ಹೋದ ಮತಗಳ ಸಹಿತ ಬಡ್ಡಿಯೂ, ಚಕ್ರಬಡ್ಡಿಯಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬರಲಿ ಎಂದವರು ಆಶಿಸಿದರು.

 

By suddi9

Leave a Reply

Your email address will not be published. Required fields are marked *