ಕೈಕಂಬ: ಮಳಲಿಯ ಉಳಿಪಾಡಿಗುತ್ತುವಿನ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಧರ್ಮನೇಮೋತ್ಸವ ನಡೆಯಲಿರುವ ಕಾರಣ ಫೆ.23ರ ಸೋಮವಾರ ಸಂಜೆ ಮೂರರ ಸುಮಾರಿಗೆ ಹೊರೆ ಕಾಣಿಕೆ ಅರ್ಪಿಸಲಾಯಿತು.
ನಾಡಾಜೆಯ ಪುಷ್ಪಪುರ ದೇವಸ್ಥಾನದದಿಂದ ಹೊರಕಾಣಕೆ ಮೆರವಣಿಗೆಗ ಮಳಲಿ ಸೀಮೆಯ ನೂರಾರು ಮಂದಿ ಭಕ್ತರು ತನ್ನ ಸತ್ಯನಾಭಕ್ತಿಯಂತೆ ಹೊರೆ ಕಾಣಿಕೆ ಅರ್ಪಿಸಿದರು. ಸೀಯಾಳ, ತೆಂಗಿನಕಾಯಿ, ಅಕ್ಕಿಮುಡಿ, ವೀಳ್ಯದೆಲೆ, ಬಾಳೆ ಹಣ್ಣು, ಹಲಸಿನ ಕಾಯಿ ಮುಂತಾದ ವಸ್ತುಗಳು ಹೊರೆ ಕಾಣಿಕೆಯಲ್ಲಿ ಸೇರಿಕೊಂಡಿದ್ದವು.
ಪುಷ್ಪಪುರದ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿದ ಬಳಿಕ ಹೊರೆಕಾಣಿಕೆಯನ್ನು ಮೆರವಣಿಗೆಯ ಮೂಲಕ ಹೊತ್ತುಕೊಂಡು ಸಾಗಲಾಯಿತು. ಕೆಲವೊಂದು ಭಾರವಾದ ವಸ್ತುಗಳನ್ನು ಸಾಗಿಸಲು ವಾಹನದ ವ್ಯವಸ್ಥ ಮಾಡಲಾಗಿತ್ತು.
ಇಲ್ಲಿ ಫೆ.20ರಿಂದ ಫೆ.27ರ ತನಕ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.















