ಮಂಗಳೂರು: ಸುರತ್ಕಲ್ ಗೋವಿಂದದಾಸ್ ಕಾಲೇಜು ವಿದ್ಯಾರ್ಥಿಗಳ ತೊಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರವನ್ನು ತಿರುಚಿ ದುರ್ಬಳಕೆ ಮಾಡಿಕೊಂಡಿರುವುದಾಗಿ ಕಾಲೇಜಿನ ವಿದ್ಯಾರ್ಥಿನಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಲೇಜು ಸಹಪಾಠಿಗಳೊಂದಿಗಿರುವ ಈ ಚಿತ್ರವನ್ನು ಫೆ.18ರಂದು ಕಾಲೇಜಿನ ವಿದ್ಯಾರ್ಥಿ ವಿನೀತ್ ಎಂಬಾತ ತೆಗೆದಿದ್ದು, ಇದು ಫೇಸ್‍ಬುಕ್ ಖಾತೆಯಲ್ಲಿತ್ತು. ಆದರೆ ಅದನ್ನು ದುಷ್ಕರ್ಮಿಗಳು ಖಾತೆಯಿಂದ ಹ್ಯಾಕ್ ಮಾಡಿ ತಿರುಚಿ ದುರ್ಬಳಕೆ ಮಾಡಿ ಫೆ.20ರಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುವಂತೆ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
