ಮೂಡುಬಿದರೆ: ಮಂಗಳೂರು ವಿ.ವಿ ಹಾಗೂ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ವತಿಯಿಂದ ಮಣಿಪಾಲ ಎಂ.ಐ.ಟಿ. ಮೈದಾನದಲ್ಲಿ ಫೆ. 16 ರಿಂದ 23 ರವರೆಗೆ ನಡೆದ ಶಿರ್ವ ಲೆಸ್ಲಿ ಗಾಡ್ವಿನ್ ಡಿಸೋಜಾ ಮೆಮೋರಿಯಲ್ ರೋಲಿಂಗ್ ಟ್ರೋಫಿಗಾಗಿ ನಡೆದ ಮಂಗಳೂರು ವಿ.ವಿ. ಉಡುಪಿ ವಲಯ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಮೂಡುಬಿದರೆಯ ಆಳ್ವಾಸ್ ತಂಡವು ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಪ್ರಥಮ ಸೆಮಿಫೈನಲ್ನಲ್ಲಿ ಯು.ಪಿ.ಎಂ.ಸಿ. ಕಾಲೇಜು ತಂಡವು ಉಡುಪಿ ತಂಡವನ್ನು 196 ರನ್ಗಳಿಂದ ಪರಾಭವಗೊಳಿಸಿ ಫೈನಲ್ ಪ್ರವೇಶಿಸಿತು.
ದ್ವಿತೀಯ ಸೆಮಿಫೈನಲ್ನಲ್ಲಿ ಎಸ್.ಎಂ.ಎಸ್. ಕಾಲೇಜು ಬ್ರಹ್ಮಾವರ ತಂಡವು ಭಂಡಾರ್ಕರ್ಸ್ ಕಾಲೇಜು ಕುಂದಾಪುರ ತಂಡವನ್ನು 9 ರನ್ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು.
ಫೈನಲ್ನಲ್ಲಿ ಆಳ್ವಾಸ್ ಕಾಲೇಜು ತಂಡವು, ಎಸ್.ಎಂ.ಎಸ್. ಕಾಲೇಜು ಬ್ರಹ್ಮಾವರ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಫೈನಲ್ನಲ್ಲಿ ಎಸ್.ಎಂ.ಎಸ್. ಕಾಲೆಜು ಬ್ರಹ್ಮಾವರ ತಂಡವು 98 ರನ್ಗಳಿಗೆ ಸರ್ವಪತನಗೊಂಡಿತು.
ಆಳ್ವಾಸ್ ಕಾಲೇಜು 17.3 ಓವರ್ನಲ್ಲಿ 3 ವಿಕೆಟ್ಗೆ 99 ರನ್ ಗಳಿಸಿತು.
ಆಳ್ವಾಸ್ ಕಾಲೇಜಿನ ರಿತೇಶ್ ಭಟ್ಕಳ್ ಪಂದ್ಯ ಶ್ರೇಷ್ಠ, ಉತ್ತಮ ದಾಂಡಿಗನಾಗಿ ಆಳ್ವಾಸ್ನ ನವೀನ್ ಶೆಟ್ಟಿ, ಉತ್ತಮ ಎಸೆತಗಾರನಾಗಿ ಎಸ್.ಎಂ.ಎಸ್. ಕಾಲೇಜಿನ ಸಚಿನ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಆಳ್ವಾಸ್ನ ಗೋಪಾಲ್ ಶೆಟ್ಟಿ ಪಡೆದುಕೊಂಡರು.
