ಬಂಟ್ವಾಳ,ಫೆ.13: ಪ್ರತಿಷ್ಠಿತ ಸಹಕಾರ ಸಂಸ್ಥೆಗಳಲ್ಲಿ ಒಂದಾದ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತ (ಭೂ ಬ್ಯಾಂಕ್)ದ ಆಡಳಿತ ಮಂಡಳಿಯ 12ಮಂದಿ ನಿದರ್ೇಶಕ ಸ್ಥಾನಕ್ಕೆ ಒಂದೂವರೆ ದಶಕಗಳ ಬಳಿಕ ಈ ಬಾರಿ ಚುನಾವಣೆ ನಡೆಯುತ್ತಿದೆ.
ಅನೇಕ ಮಂದಿಯ ರಾಜಕೀಯ ಬೆಳವಣಿಗೆಗೆ ಕ್ಷೇತ್ರವನ್ನು ಒದಗಿಸಿದ ಬಂಟ್ವಾಳ ಭೂ ಬ್ಯಾಂಕಿನಲ್ಲಿ ,ಬಿರುಸಿನ ರಾಜಕೀಯ ಪ್ರಕ್ರಿಯೆಗಳು ನಡೆಯುತ್ತಿದೆ. ಆ ಕಾರಣಕ್ಕಾಗಿ ಬಿ.ಜೆ.ಪಿ.-ಕಾಂಗ್ರೆಸ್ ಮಧ್ಯ ತೀವ್ರ ಹಣಾಹಣಿ ನಡೆಯುತ್ತಿದೆ.
ಬಂಟ್ವಾಳ ಭೂಬ್ಯಾಂಕ್ಗೆ ಫೆ.15ರಂದು ಚುನಾವಣೆ ನಡೆಯಲಿದ್ದು 12ಸ್ಥಾನಕ್ಕೆ 24 ಮಂದಿ ಚುನಾವಣಾ ಕಣದಲ್ಲಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯಥರ್ಿಗಳಾಗಿ ಬ್ಯಾಂಕಿನ ಹಾಲಿ ಅಧ್ಯಕ್ಷ ಸುದರ್ಶನ್ ಜೈನ್, ಉಪಾಧ್ಯಕ್ಷ ಸಂಜೀವ ಪೂಜಾರಿ, ಜಿ.ಪಂ.ಸದಸ್ಯ ಚಂದ್ರ ಪ್ರಕಾಶ ಶೆಟ್ಟಿ ಸಹಿತ ಕೆಲ ಹಾಲಿ ನಿದರ್ೇಶಕರು ಕಣದಲ್ಲಿದ್ದಾರೆ.
ಬಿಜೆಪಿಯಿಂದ ಇದೆ ಮೊದಲ ಬಾರಿಗೆ ಬ್ಯಾಂಕಿನ ಎಲ್ಲಾ ನಿದರ್ೇಶಕ ಸ್ಥಾನಗಳಿಗೆ ಅಭ್ಯಥರ್ಿಗಳನ್ನು ಕಣಕ್ಕಿಳಿಸಲಾಗಿದೆ.
ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ಎದುರು ತಾ.ಪಂ.ಮಾಜಿ ಸದಸ್ಯ ಗೋಪಾಲ ಕೃಷ್ಣ ಚೌಟ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ. ಸಾಲಗಾರಲ್ಲದ ಕ್ಷೇತ್ರದಲ್ಲಿ ಉಪಾಧ್ಯಕ್ಷ ಸಂಜೀವ ಪೂಜಾರಿ ಎದುರು ಬಿಜೆಪಿ ಯುವ ಮುಖಂಡ ಪ್ರಮೋದ್ ಕುಮಾರ್ ರೈ ಕಣದಲ್ಲಿದ್ದಾರೆ.
ಸಂಗಬೆಟ್ಟು ಕ್ಷೇತ್ರದಲ್ಲಿ ಚಂದ್ರಶೇಖರ್ ಶೆಟ್ಟಿ (ಕಾಂಗ್ರೆಸ್), ನಂದಪ್ಪ ರೈ ಬಿ( ಬಿಜೆಪಿ)
ಪಿಲಾತಬೆಟ್ಟು ಮಹಿಳಾ ಮೀಸಲು ಕ್ಷೇತ್ರದಲ್ಲಿ ಪುಷ್ಪಾವತಿ (ಕಾಂಗ್ರೆಸ್), ತ್ರಿಶಲ (ಬಿಜೆಪಿ)
ಪಾಣೆಮಂಗಳೂರು ಮಹಿಳಾ ಮೀಸಲು ಕ್ಷೇತ್ರದಿಂದ ಸುಜಾತ ರೈ (ಕಾಂಗ್ರೆಸ್) ಮೋಹಿನಿ ಜೆ.ಶೆಟ್ಟಿ (ಬಿಜೆಪಿ)ಸರಪಾಡಿ ಕ್ಷೇತ್ರದಿಂದ ಶಿವಪ್ಪ ಪೂಜಾರಿ (ಕಾಂಗ್ರೆಸ್)ಪೂವಪ್ಪ ಪೂಜಾರಿ (ಬಿ.ಜೆ.ಪಿ)
ಬಿ.ಮೂಡ ಗ್ರಾಮ ಚಂದ್ರಪ್ರಕಾಶ್ ಶೆಟ್ಟಿ (ಕಾಂಗ್ರೆಸ್)ವಿವೇಕಾನಂದ ಆಳ್ವ (ಬಿ.ಜೆ.ಪಿ)
ಸಜಿಪಪಡು ಪರಮೇಶ್ವರ ಎಂ.(ಕಾಂಗ್ರೆಸ್), ಕೃಷ್ಣಪ್ಪ ಬೆಳ್ಚಡ(ಬಿ.ಜೆ.ಪಿ)
ಪಜೀರು -ಚಂದ್ರಹಾಸ ಕಕರ್ೆರ (ಕಾಂಗ್ರೆಸ್)ರಮೇಶ್ ಶೆಟ್ಟಿ (ಬಿ.ಜೆ.ಪಿ.)
ಮಾಣಿ ಕ್ಷೇತ್ರದಿಂದ ಮುರಳೀಧರ್ ಶೆಟ್ಟಿ (ಕಾಂಗ್ರೆಸ್)ಕೇಶವ ಶೆಟ್ಟಿ (ಬಿಜೆಪಿ)
ಕೊಳ್ನಾಡು-ರಾಜೇಶ್ ಕುಮಾರ್ (ಕಾಂಗ್ರೆಸ್)ಪ್ರಭಾಕರ ಶೆಟ್ಟಿ (ಬಿಜೆಪಿ)
ಕೇಪು -ಪ.ಜಾ.ಪ.ಪಂ.ಕ್ಷೇತ್ರದಲ್ಲಿ ಹೊನ್ನಪ್ಪ ನಾಯ್ಕ್ (ಕಾಂಗ್ರೆಸ್)ಕೃಷ್ಣ ನಾಯಕ್ (ಬಿಜೆಪಿ)
ತಾಲೂಕಿನ 84ಗ್ರಾಮಗಳಲ್ಲಿ ಈ ಬ್ಯಾಂಕಿಗೆ ಸದಸ್ಯರನ್ನು ಹೊಂದಿದ್ದು ಸಾಲಗಾರರ ಕ್ಷೇತ್ರದಲ್ಲಿ 3,484 ಹಾಗೂ ಸಾಲಗಾರರಲ್ಲದ ಕ್ಷೇತ್ರದಲ್ಲಿ 669 ಸದಸ್ಯರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಅಂದು ಬೆಳಿಗ್ಗೆ 9ರಿಂದ ಸಂಜೆ 4ಗಂಟೆಯವರೆಗೆ ಬ್ಯಾಂಕಿಗೆ ಕೇಂದ್ರ ಕಛೇರಿಯಲ್ಲಿ ಮತದಾನ ನಡೆಯಲಿದೆ.
ಬಳಿಕ ಅಂದೆ ಸಂಜೆ ಮತ ಏಣಿಕೆ ನಡೆಯುವುದು.
ಭೂ ಬ್ಯಾಂಕಿನಲ್ಲಿ ಆಡಳಿತ ಕಾಂಗ್ರೆಸ್ ಬೆಂಬಲಿತವಾಗಿದ್ದು, ಶತಾಯ ಗತಾಯವಾಗಿ ಬಿಜೆಪಿ ಭೂಬ್ಯಾಂಕಿನ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಸುತ್ತಿದೆ. ಇನ್ನೊಂದು ಮುಖದಿಂದಲೂ ಈ ಚುನಾವಣೆಯನ್ನು ಬಿಜೆಪಿ ನೋಡುತ್ತಿದ್ದು ಭೂ ಬ್ಯಾಂಕಿನಲ್ಲಿ ತನ್ನ ಬಲವೆಷ್ಟು ಎಂಬುದನ್ನು ಪರೀಕ್ಷಿಸಲು ಇದರ ನಡುವೆ ಯೋಜನೆರೂಪಿಸಿದೆ.

By Suddi9

Leave a Reply

Your email address will not be published. Required fields are marked *