ಸುದ್ದಿ9 ನೆಲ್ಯಾಡಿ: ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ನಾಲ್ಕು ವರ್ಷ ಪ್ರಾಯದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ಘಟನೆ ಮಂಗಳವಾರ ಸಂಜೆ ನಡೆದಿದ್ದು, ಉಪ್ಪಿನಂಗಡಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ವಿವರ: ಉದನೆ ಪೇಟೆಯಲ್ಲಿ ಹೋಟೆಲ್ ವೃತ್ತಿ ನಡೆಸುತ್ತಿರುವ ರೆಖ್ಯ ಗ್ರಾಮದ ವ್ಯಕ್ತಿಯೊಬ್ಬರ ನಾಲ್ಕು ವರ್ಷ ಪ್ರಾಯದ ಪುತ್ರಿಯ ಮೇಲೆ ನೆರೆಕರೆಯಲ್ಲೇ ಇರುವ ಟೈರ್ ಅಂಗಡಿ ಮಾಲೀಕ ಶಿರಾಡಿ ಬಾಗಿಲುಗದ್ದೆ ವೆಂಕಪ್ಪ ಗೌಡ ಎಂಬವರ ಮಗ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಮೋದ್ (19) ಎಂಬಾತ ಮಂಗಳವಾರ ಸಂಜೆ ಬಾಲಕಿಯನ್ನು ಪುಸಲಾಯಿಸಿ ಟೈರ್ ರಿಪೇರಿ ಅಂಗಡಿಗೆ ಕರಕೊಂಡು ಹೋಗಿದ್ದಾನೆ. ಬಾಲಕಿ ಮನೆಯಲ್ಲಿ ಕಾಣಿಸದಿದ್ದಾಗ ಹುಡುಕತೊಡಗಿದ್ದು, ಪಕ್ಕದಲ್ಲಿರುವ ಅಂಗಡಿಗೆ ಹೋದದ್ದನ್ನು ಗಮನಿಸಿದವರು ಮಾಹಿತಿ ನೀಡಿದರು. ಬಾಲಕಿಯ ತಂದೆ ಟೈರ್ ಅಂಗಡಿಗೆ ಹೋದಾಗ ಅಂಗಡಿ ಎದುರು ಭಾಗದಲ್ಲಿ ಟರ್ಪಾಲಿನಿಂದ ಮುಚ್ಚಿದ್ದು, ಹಿಂಬದಿಯಿಂದ ಹೋಗಿ ನೋಡಿದಾಗ ಆರೋಪಿಯು ಬಾಲಕಿಯ ಬಟ್ಟೆ ಕಳಚಿರುವುದು ಕಂಡುಬಂತು. ಕೂಡಲೇ ಅಂಗಡಿಯ ಒಳಗೆ ಹೋಗಿ ಬಾಲಕಿಯನ್ನು ರಕ್ಷಿಸಲಾಯಿತು. ಘಟನೆ ಕುರಿತಂತೆ ಉಪ್ಪಿನಂಗಡಿ ಪೊಲೀಸರಿಗೆ ಬಾಲಕಿಯ ತಂದೆ ನೀಡಿದ ದೂರಿನನ್ವಯ ಆರೋಪಿಯನ್ನು ಪೊಲೀಸರು ತಕ್ಷಣ ಬಂಧಿಸಿದ್ದಾರೆ. ಬುಧವಾರ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
rap

By suddi9

Leave a Reply

Your email address will not be published. Required fields are marked *