ಮಂಗಳೂರು : ಕುವೈಟ್ ಸಿಟಿ: ಕುವೈಟ್ ನಲ್ಲಿ ನಡೆದ ಅಪಘಾತವೊಂದರಲ್ಲಿ ಮಂಗಳೂರಿನ ಯುವಕ ಅವಿನಾಶ್ ಪಿರೇರಾ (33) ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೂಲತಃ ಮಂಗಳೂರಿನ ಕೆಲರಾಯಿ ಪ್ರದೇಶದವರಾದ ಅವಿನಾಶ್ ಕುವೈಟ್ ನಲ್ಲಿ ಎಫ್ಎಮ್ಸಿ ಟೆಕ್ನಾಲಜಿಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು.
ಅವಿನಾಶ್ ಮಂಗಳೂರಿನ ಬಜ್ಪೆಯ ಸುಂಕದಕಟ್ಟೆ ನಿರಂಜನ ಸ್ವಾಮಿ ಪಾಲಿಟೆಕ್ನಿಕ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ವ್ಯಾಸಂಗ ಮಾಡಿದ್ದು ವಿವಾಹಿತರಾಗಿದ್ದು ಇಬ್ಬರು ಮಕ್ಕಳಿದ್ದಾರೆಂದು ತಿಳಿದು ಬಂದಿದೆ.

