ಸುದ್ದಿ9 ಉಳ್ಳಾಲ: ರಾಣಿಪುರದ ಮೇರಿ ವಿಶ್ವಮಾತೆ ಮರಿಯಾ ಇಗರ್ಜಿಯ ವಾರ್ಷಿಕೋತ್ಸವ ಸಮಾರಂಭ ಬುಧವಾರ ನಡೆಯಿತು. ರೆಕ್ಟರ್ ಸಂತ ಜೋಸೆಫರ ಸೆಮಿನರಿಯ ಪ್ರಧಾನ ಧರ್ಮಗುರು ಫಾ.ಜೋಸೆಫ್ ಮಾರ್ಟಿಸ್ ಬಲಿಪೂಜೆ ನೆರವೇರಿಸಿದರು. ವಿಶ್ವಮಾತೆ ಮರಿಯಾ ಚರ್ಚಿನ ಧರ್ಮಗುರು ಫಾ.ಸಂತೋಷ್ ಡಿಸೋಜಾ ಹಾಗೂ ದಕ್ಷಿಣ ವಲಯದ ಧರ್ಮಗುರುಗಳು ಉಪಸ್ಥಿತರಿದ್ದರು.























