ಅಯನಾ-ಮೋನಿಕಾ `ನಾಟ್ಯಾಯನ’, ಇಡಗುಂಜಿಯಲ್ಲಿ ಇಂದು ಪ್ರದರ್ಶನ
ಸುದ್ದಿ9   ಮೂಡುಬಿದರೆ: ಮನೆ ಮನೆ ಭರತನಾಟ್ಯದಿಂದ ಮನೆಮಾತಾಗಿರುವ ಬಾಲಕಲಾವಿದೆ ಅಯನಾ.ವಿ.ರಮಣ್ ಹಾಗೂ ದೂರದರ್ಶನ ಭರತನಾಟ್ಯ ಕಲಾವಿದೆ ಮೋನಿಕಾ ರಾವ್ ಅವರ `ನಾಟ್ಯಾಯನ’ ವಿಶಿಷ್ಟ ನೃತ್ಯ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮನ್ನಣೆ ಲಭಿಸಿದೆ.
ಇಡಗುಂಜಿಯ ಗುಣವಂತೆಯಲ್ಲಿ ನಡೆಯುತ್ತಿರುವ ಕೆರೆಮನೆ ಶಂಭುಹೆಗ್ಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಫೆ.10ರಂದು `ನಾಟ್ಯಾಯನ’ಯನ ಪ್ರದರ್ಶನವಿದೆ.
ಏನಿದು ನಾಟ್ಯಾಯನ: ನಾಟ್ಯಾಯನ ಎನ್ನುವ ನೃತ್ಯ ಪ್ರಕಾರ ಸಂಗೀತ, ನೃತ್ಯ,ಸಂಸ್ಕ್ರತಿಯ ಜೊತೆಗೆ ಶಿಕ್ಷಣವನ್ನೊಳಗೊಂಡು ಭರತನಾಟ್ಯದಲ್ಲಿ ಒಂದು ಹೊಸ ಅನ್ವೇಷಣೆಯಾಗಿದೆ. ಮಂಗಳೂರು ರಂಗಭಾರತಿ ನಿರ್ದೇಶಕ ಕೆ.ವಿ.ರಮಣ್ ಅವರ ಪರಿಕಲ್ಪನೆ, ನಿರ್ದೇಶನದಲ್ಲಿ `ನಾಟ್ಯಾಯನ’ ಮೂಡಿದೆ. 220ಕ್ಕೂ ಅಧಿಕ ಕವಿನಾಮ ಸ್ಮರಣೆ, 130ಕ್ಕೂ ಅಧಿಕ ದೈವಗಳ ನಾಮಾವಳಿ, ಗಾಯನ, ಕಂಠಪಾಠ,72 ರಾಗಗಳ ಮಾಹಿತಿ,35 ತಾಳಗಳ ಪ್ರಾತ್ಯಕ್ಷಿಕೆಯ ಒಟ್ಟು ಒಂದು ಪ್ರದರ್ಶನವೇ `ನಾಟ್ಯಾಯನ’. ಈಗಾಗಲೇ 25ಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡಿರುವ ನಾಟ್ಯಾಯನ ಫೆ.20ರಂದು ಪತ್ತೂರಿನ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲೂ ಪ್ರದರ್ಶನಗೊಳ್ಳಲಿದೆ.

mbd_feb9_3

By suddi9

Leave a Reply

Your email address will not be published. Required fields are marked *