ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇದೇ 6ರಿಂದ ಮೊದಲ್ಗೊಂಡು 10ರತನಕ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಗುರುವಾರ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ಮೂಲಕ ಚಾಲನೆ ದೊರೆತಿದೆ.

ಗುರುವಾರ ಸಂಜೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆದಿದ್ದು, ಅಪಾರ ಮಂದಿ ಭಕ್ತರು ಅಕ್ಕಿ, ತೆಂಗಿನಕಾಯಿ, ತರಕಾರಿ, ಸೀಯಾಳ, ಹಿಂಗಾರ ಮತ್ತಿತರ ಸಾಮಾಗ್ರಿಗಳನ್ನು ಸಮರ್ಪಿಸಿದ್ದಾರೆ.
ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ತಿಮ್ಮಪ್ಪ ನಾಕ್ ನಡಿಗುತ್ತು, ಉದ್ಯಮಿ ವಾಸುದೇವ ಭಟ್ ಕುಂಜತ್ತೋಡಿ, ವಸಂತ ಹೆಗ್ಡೆ, ಉದ್ಯಮಿ ಕಾಪು ಜಯರಾಮ ಶೆಟ್ಟಿ, ಕಲ್ಲಬೆಟ್ಟು ದೇವಸ್ಥಾನದ ಆಡಳಿತ ಮೊಕ್ತೇಶ್ವರ ನಾರಾಯಣ ಶೆಟ್ಟಿ, ಗುರುದಾಸ್ ಕಕರ್ೆರ ಕುತ್ತಿಲ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ, ಆಡಳಿತ ಧರ್ಮದರ್ಶಿ ಉದಯ ಪಾಂಗಣ್ನಾಯ, ಧರ್ಮದರ್ಶಿ ಕೆ.ಲಕ್ಷ್ಮೀನಾರಾಯಣ ಉಡುಪ, ಕೆ.ಬೂಬ ಪೂಜಾರಿ, ಡಾ.ರಾಮಕೃಷ್ಣ.ಎಸ್, ಸುಂದರ ನಾಯ್ಕ, ಸಂತೋಷ್ ಕುಮಾರ್ ಶೆಟ್ಟಿ, ಬೂಬ ಸಪಲ್ಯ, ವಿಜಯ ರೈ, ಶಂಕರ್ ಶೆಟ್ಟಿ ಬೆದ್ರ್ಮಾರ್, ಪ್ರಶಾಂತ್ ಕೋಟ್ಯಾನ್ ಮತ್ತಿತರರು ಇದ್ದರು.
