ಬಂಟ್ವಾಳ:ತಾಲ್ಲೂಕಿನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ನಾಗಬನ ಸಮೀಪದಲ್ಲಿರುವ ಬೃಹತ್ ಗಾತ್ರದ ಕಂಬಳ ಗದ್ದೆಯಲ್ಲಿ ಇದೇ 6ರಂದು ‘ಅಷ್ಟಪವಿತ್ರ ನಾಗಮಂಡಲ ವೈಭವೋತ್ಸವ’ ಕಾರ್ಯಕ್ರಮ ನಡೆಯಲಿದೆ.

ಈಗಾಗಲೇ ಕ್ಷೇತ್ರದಲ್ಲಿ ಬಾಳೆಗೊನೆ ಮುಹೂರ್ತ, ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆದಿದ್ದು, ಧರ್ಮಸ್ಥಳ ಧರ್ಮಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ಕಂಬಳಗದ್ದೆಯಲ್ಲಿ ನಾಗಮಂಡಲೋತ್ಸವಕ್ಕೆ ಬೃಹತ್ ಚಪ್ಪರ ನಿರ್ಮಾಣಗೊಳ್ಳುತ್ತಿದೆ.

ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ನಾಗಬನದಲ್ಲಿರುವ ನಾಗನಕಟ್ಟೆ ಸುತ್ತಲೂ ಹುತ್ತ ಬೆಳೆದಿದೆ.5btl-hutta

5btl-karanji

ನಾಗಬನ ಮತ್ತು ಹುತ್ತ5btl-nagakatte

5btl-chappar

ಕಳೆದ 4ರಿಂದ (ಬುಧವಾರ) ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಇದೇ 10ರತನಕ ಮಂಗಳವಾರ ಪ್ರತಿದಿನ ಸಾರ್ವಜನಿಕ ಅನ್ನಸಂತರ್ಪಣೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿದೆ.
ಇದೇ 6ರಂದು ಮಧ್ಯಾಹ್ನ ಹೊಸನಗರ ಶ್ರೀ ರಾಮಚಂದ್ರಾಪುರ ಯಕ್ಷಗಾನ ಮಂಡಳಿಯಿಂದ ‘ಯಕ್ಷಗಾನ ಬಯಲಾಟ’, ರಾತ್ರಿ ನಾಗಬನದಲ್ಲಿ ಹಾಲಿಟ್ಟು ಸೇವೆ ಬಳಿಕ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿ ನೇತೃತ್ವ ಮತ್ತು ವೇದಮೂರ್ತಿ  ನರಸಿಂಹ ಮಯ್ಯರ ಪೌರೋಹಿತ್ಯದಲ್ಲಿ ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ ಪೆರ್ಡೂರು, ಮದ್ದೂರು ಕೃಷ್ಣಪ್ರಸಾದ ವೈದ್ಯರು, ಬಾಲಕೃಷ್ಣ, ನಟರಾಜ ಬಳಗದ ಆಕರ್ಷಕ ಕುಣಿತದೊಂದಿಗೆ ‘ಅಷ್ಟಪವಿತ್ರ ನಾಗಮಂಡಲೋತ್ಸವ’ ನಡೆಯಲಿದೆ. ಇದರ ಯಶಸ್ವಿಗೆ ವಿವಿಧ ಸಮಿತಿ ಸದಸ್ಯರು ಸಂಘಟನಾತ್ಮಕವಾಗಿ ಶ್ರಮಿಸುತ್ತಿದ್ದಾರೆ.
ಇದೇ 7ರಿಂದ 9ರತನಕ ಇಲ್ಲಿನ ಆರಾದ್ಯ ದೈವಗಳಿಗೆ ‘ಧರ್ಮನೇಮೋತ್ಸವ’ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಎ.ರವಿಶಂಕರ ಶೆಟ್ಟಿ ಬಡಾಜೆಗುತ್ತು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *