ಸುದ್ದಿ9 ಪೆರಾರ: ಶ್ರೀ ಕ್ಷೇತ್ರ ಪೆರಾರ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಸುಧೀರ್ ಪ್ರಸಾದ್ ಶೆಟ್ಟಿ ತಿದ್ಯ ಮುಂಡಬೆಟ್ಟುಗುತ್ತು ಇವರ ನೇತೃತ್ವದಲ್ಲಿ 150ಕ್ಕೂ ಹೆಚ್ಚಿನ ಭಕ್ತಾದಿಗಳಿಂದ ಶ್ರೀ ಕ್ಷೇತ್ರ ಪೆರಾರ ದೇವಸ್ಥಾನದ ಪರಿಸರದ ವಠಾರದ ಕಸ ವಿಲೇವಾರಿ ಮಾಡುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಸಾಮಾಜಿಕ ಕಳಕಳಿಯನ್ನು ಮೆರೆದರು.
ಇದೇ ಬರುವ ಮಾರ್ಚ್ 4ರಿಂದ ಮಾರ್ಚ್ 7ರ ತನಕ ಶ್ರೀ ಕ್ಷೇತ್ರ ಪೆರಾರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಜರಗಲಿರುವುದು.



