ಸುದ್ದಿ9 ಬಂಟ್ವಾಳ : ಪುರಸಭಾ ವ್ಯಾಪ್ತಿಯ 13ನೇ ಹಣಕಾಸು ಅನುದಾನದ ರೂ .8.00 ಲಕ್ಷ ವೆಚ್ಚದಲ್ಲಿ ಬಿ.ಮೂಡ ಗ್ರಾಮದ ಕಲ್ಲಗುಡ್ಡೆ ಅರಂತಾಡೆ ಬರ್ಕಟ ಪ್ರದೇಶಕ್ಕೆ ಕಿರು ನೀರುಸರಬರಾಜು ಯೋಜನೆಯ ಉದ್ಘಾಟನೆಯನ್ನು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ , ಪುರಸಭಾ ಸದಸ್ಯರಾದ ರಾಮಕೃಷ್ಣ ಆಳ್ವ , ಸದಾಶಿವ ಬಂಗೇರಾ, ವಾಸು ಪೂಜಾರಿ , ಪಾಣೆ ಮಂಗಳೂರು ಬ್ಲಾಕ್.ಅಧ್ಯಕ್ಷ ಅಬ್ಬಾಸ್ ಆಲಿ , ಪುರಸಭಾ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೋ, ಮೆಸ್ಕಾಂ ಇಂಜಿನಿಯರ್ ಸುಬ್ರಹ್ಮಣ್ಯ ಪ್ರಸಾದ್ , ಗುತ್ತಿಗೆದಾರ ಸಂಜೀವ ಶೆಟ್ಟಿ , ಒಸ್ವಾಲ್ಡ್ ಗೋವಿಯಸ್, ರಘುನಾಥ ಚೌಟ , ಇಬ್ರಾಹಿಂ , ಬಶೀರ್, ರಫೀಕ್ ಉಪಸ್ಥಿತರಿದ್ದರು.

