ಮೂಡುಬಿದರೆ: ಭಗವಂತನ ಮೇಲಿನ ಭಕ್ತಿ ಶ್ರದ್ಧೆಯಿಂದ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಯಾಗ, ಪೂಜೆ, ಆರಾಧನೆಗಳು ದೇವರನ್ನು ಒಲಿಸಿಕೊಳ್ಳಲು ಇರುವ ಮಾರ್ಗಗಳು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ನುಡಿದರು.
ಕರಿಂಜೆ ಶ್ರೀ ಲಕ್ಮೀ ಸತ್ಯನಾರಾಯಣ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಫೆ.1ರಂದು ಜರುಗಿದ ನಾಗದೇವರ ಪುನರ್ ಪ್ರತಿಷ್ಠೆ, ನಾಗತನುತರ್ಪಣ ಮತ್ತು ಶ್ರೀ ಲಕ್ಮೀನಾರಾಯಣ ಹೃದಯ ಯಾಗದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನಗೈದರು.
karinje photo

 
ಸಾಧನೆಗೆ ಮನುಷ್ಯ ಪ್ರಯತ್ನ ಬೇಕು. ಅದರೊಂದಿಗೆ ಭಗವಂತನ ಅನುಗ್ರಹವೂ ಬೇಕು. ದೇವರ ಒಲಿಸಿಕೊಳ್ಳಲು ಮಾಡಿದ ಯಾಗದ ಧೂಮದಿಂದ ಓಜೋನ್ ಪರದೆಯ ಬಿರುಕು ಕೂಡ ನಿವಾರಣೆಗೊಂಡಿದೆ ಎಂದು ಸ್ವಾಮೀಜಿ ಹೇಳಿದರು.
ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನಗೈದರು. ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಚಿವ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕರಿಂಜೆ ಸ್ವಾಮೀಜಿಯವರು ಶ್ರದ್ಧಾ ಭಕ್ತಿಯ ತಪಸ್ಸುಗೈದು ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಸಿದ್ಧಿ ಸಾಧನೆಯಿಂದ ಸಮಾಜಕ್ಕೂ ಉತ್ತಮ ಹೆಸರು ತರುತ್ತಿದ್ದಾರೆ ಎಂದು ಹೇಳಿದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ, ಕಾರ್ಯದರ್ಶಿ  ಸುದರ್ಶನ್ ಎಂ., ಪುರಸಭಾಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷ ನಂಜಪ್ಪ, ಜಿಲ್ಲಾ ಸಂಘದ ಅಧ್ಯಕ್ಷ ಪ್ರಕಾಶ್ ಬಿ. ಎನ್., ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಾಪಣ್ಣ, ಕೃಷ್ಣ ಕಲ್ಲೋಡಿ, ಉದ್ಯಮಿ ಪ್ರಸಾದ್ ಶೆಟ್ಟಿ, ಪುರುಷೋತ್ತಮ ಮೈಸೂರು, ಗ್ರಾಮದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಮಜಲೋಡಿ, ವಿಶ್ವನಾಥ ಶೆಟ್ಟಿ ಅಧೋಳಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ದಾನಿಗಳನ್ನು ಗೌರವಿಸಲಾಯಿತು
ದೇವಸ್ಥಾನದ ಸಮಿತಿಯ ಪ್ರಧಾನ ಕಾರ್ಯದರ್ಶಿ  ಸುಧಾಕರ ಪಿ. ನೂಯಿ ಸ್ವಾಗತಿಸಿದರು. ಕಿಶೋರ್ ಸಾಲಿಯಾನ್ ಧನ್ಯವಾದವಿತ್ತರು. ಶಿಕ್ಷಕ ಯುವರಾಜ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಶ್ರೀ ಲಕ್ಷ್ಮೀಸತ್ಯನಾರಾಯಣ ಹೃದಯಯಾಗ ರಾತ್ರಿ ಮಾರೂರು ಖಂಡಿಗ ರಾಮದಾಸ ಅಸ್ರಣ್ಣ ನೇತೃತ್ವದಲ್ಲಿ ನಾಗತನುತರ್ಪಣ, ತುಳು ನಾಟಕ ಜರುಗಿತು

By suddi9

Leave a Reply

Your email address will not be published. Required fields are marked *