ಮೂಡುಬಿದರೆ: ಪಡುಮಾರ್ನಾಡು ಗ್ರಾಮದ ಬನ್ನಡ್ಕ ನಿವಾಸಿ ರಮೇಶ್ ರಾವ್(64) ಶನಿವಾರ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರ,ಪುತ್ರಿಯನ್ನು ಅಗಲಿದ್ದಾರೆ.
ಬನ್ನಡ್ಕದಲ್ಲಿ ಸೋನ್ಸ್ ಫಾರ್ಮ್ನಲ್ಲಿ 42 ವರ್ಷಗಳಿಂದ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಬನ್ನಡ್ಕ ಶ್ರೀ ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿದ್ದ ಅವರು, 34 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ಥಳೀಯ ಒಕ್ಕೂಟದಲ್ಲೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

