ಕುಸೇಲ್ದರಸನಿಗೆ ಈಗ ಭಾರೀ ಬೇಡಿಕೆ
ಮಂಗಳೂರು: ತುಳು ರಂಗಭೂಮಿ ಮತ್ತು ಸಿನಿಮಾ ರಂಗದ ಅಗ್ರಗಣ್ಯರ ಸಾಲಲ್ಲಿ ಹೊಳೆಯುತ್ತಿರುವ ಕಲಾವಿದ ಕುಸೇಲ್ದರಸ ನವೀನ್ ಡಿ. ಪಡೀಲ್ ಅವರಿಗೆ ಸಂದೇಶ ಸಂಸ್ಕøತಿ ಮತ್ತು ಶಿಕ್ಷಣ ಪ್ರತಿಷ್ಠಾನದ 2005ರ ಸಂದೇಶ ಪ್ರಶಸ್ತಿ ಸಲ್ಲುವ ಮೂಲಕ ಅವರ ಪ್ರತಿಭೆಗೆ ಸೂಕ್ತ ಮಾನ್ಯತೆ ಸಿಗು ವುದರೊಂದಿಗೆ, ಆ ಪ್ರಶಸ್ತಿಯ ಮೌಲ್ಯವೂ ಹೆಚ್ಚಾದಂತಿದೆ.

ಪ್ರಸ್ತುತ ತುಳು ಸಿನಿಮಾ ರಂಗದಲ್ಲಿ ಅತಿ ಬೇಡಿಕೆಯ ಮತ್ತು ಹೆಚ್ಚು ಸಂಭಾವನೆ ಪಡೆಯುವ ನಟನಾಗಿರುವ ನವೀನ್ ಡಿ. ಪಡೀಲ್ ಅವರಿಗೆ ಚಾಲಿ ಪೋಲಿಲು ಸಿನಿಮಾದ ಬಳಿಕ ಅವಕಾಶಗಳು ಹರಿದು ಬರುತ್ತಿದೆ. ಚಾಲಿ ಪೋಲಿಲುನಲ್ಲಿ ಅವರು ಅತ್ಯುತ್ತಮ ಅಭಿನಯ ನೀಡಿದ್ದಾರೆ. ಅವರು ನಟಿಸಿ ರುವ ಸೂಂಬೆ, ಎಕ್ಕಸಕ, ಸೂಪರ್ ಮರ್ಮಯೆ ಇತ್ಯಾದಿ ಸಿನಿಮಾಗಳು ಸದ್ಯೋಭವಿಷ್ಯದಲ್ಲಿ ಬಿಡುಗಡೆಯಾ ಗಲಿವೆ. ಕುಡ್ಲ ಕೆಫೆಯಂಥ ಸಿನಿಮಾಗಳು ಚಿತ್ರೀಕರಣ ಹಂತದಲ್ಲಿದೆ. ಜಯಕಿರಣ ಫಿಲಂಸ್‍ರವರ ಹೊಸ ಚಿತ್ರದಲ್ಲೂ ನವೀನ್ ಪಡೀಲ್‍ರಿಗೆ ಪ್ರಮುಖ ಪಾತ್ರವಿದೆ. ಅಲ್ಲದೆ ದೇವ್‍ದಾಸ್ ಕಾಪಿ ಕಾಡ್‍ರವರ `ಚಂಡಿಕೋರಿ’ಯಲ್ಲೂ ಪಡೀಲ್ ಹೊಸ ಗೆಟಪ್‍ನಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ಕಡಲಮಗೆ ಖ್ಯಾತಿಯ ಪ್ರವೀಣ್ ತೊಕ್ಕೊಟ್ಟು ಅವರ ಜೈ ತುಳು ನಾಡು ಚಿತ್ರದಲ್ಲೂ ಪ್ರಮುಖ ಪಾತ್ರವಿದೆ.
ಪ್ರಸ್ತುತ ನವೀನ್ ಡಿ. ಪಡೀಲ್ ಅವರಿಗೆ ತುಳು ಸಿನಿಮಾ ರಂಗದಲ್ಲಿ ಬಹಳಷ್ಟು ಬೇಡಿಕೆ ಬರುತ್ತಿದೆ. ಇವರಿ ಗಾಗಿ ನಿರ್ಮಾಪಕರು ಮತ್ತು ನಿರ್ದೇ ಶಕರು ಕಾದು ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗೀಗ ತುಳು ಸಿನಿಮಾಗಳ ಸಂಖ್ಯೆಯಲ್ಲೂ ಹೆಚ್ಚಳ ವಾಗುತ್ತಿರುವುದು, ಪ್ರತಿ ಸಿನಿಮಾದಲ್ಲೂ ಪಡೀಲ್ ಬೇಕು ಎಂದು ಪ್ರೇಕ್ಷಕರು ಬಯಸುತ್ತಿರುವುದನ್ನು ನಿರ್ಮಾಪಕರು ತಿಳಿದುಕೊಂಡು ಅವರಿಗಾಗಿ ಕಾಲ್ ಶೀಟ್ ಹಿಡಿದು ಕಾಯುತ್ತಿರುವುದು ಕಂಡುಬರುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಪಡೀಲ್ ತುಂಬಾ ಬ್ಯುಸಿಯಾಗುತ್ತಿರು ವುದು ಸಹಜ. ಇದು ಅವರ ನಟನಾ ಕೌಶಲಕ್ಕಿರುವ ಬೇಡಿಕೆಗೆ ಒಂದು ಉತ್ತಮ ಸಾಕ್ಷಿ. ಇಂಥ ಕಲಾವಿದನಿಗೆ ಈ ಹಿಂದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಸಮ್ಮಾನಗಳು ಸಂದಿವೆ. ಆ ಸಾಲಿಗೆ ಈಗ ಬಂದಿರುವ ಸಂದೇಶ ಪ್ರಶಸ್ತಿಯು ಹೊಸ ಸೇರ್ಪಡೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿರುವ ಪಡೀಲ್ ಅವರಿಗೆ ಇನ್ನಷ್ಚು ಪ್ರಶಸ್ತಿ, ಗೌರವ ಒಲಿಯಲಿ.
