ವಸಂತ ಎಮ್ ಬೆಳ್ಳೂರು ಮಂಗಳೂರು
ಕಾಂಕ್ರೀಟ್ ಕಾಡಿನಲ್ಲೊಂದು ನಂದಗೊಕುಲ. ನಗರವಾಸಿಗಳು ಬೆಳಗ್ಗೆ ಎದ್ದು ಹಾಲಿಗಾಗಿ ಬೂತ್ಗಳ ಕಡೆ ಹೆಜ್ಜೆ ಹಾಕುತ್ತಿದ್ದರೆ, ನಗರದ ಮದ್ಯೇಯೇ ಇರುವ ಈ ಮನೆಯಲ್ಲಿ ದಿನ ಹರಿಯುತ್ತಿದೆ ಹಾಲಿನ ಹೊಳೆ. ಕೇವಲ 8 ಸೆಂಟ್ಸ್ ಜಾಗದಲ್ಲಿ 25ಕ್ಕೂ ಅಕ ದನಗಳನ್ನು ಸಾಕಿ ಹೈನುಗಾರಿಕೆಯಲ್ಲಿ ಕಳೆದ 40 ವರ್ಷಗಳಿಂದ ಸಾಧನೆ ಮೆರೆದಿದ್ದಾರೆ ಮನೆಯೊಡತಿ ಭಾಗೀರಥಿ.
ಮಂಗಳೂರು ಮಹಾನಗರ ಪಾಲಿಕೆಯ ಜೆಪ್ಪು ಗುಜ್ಜರಕೆರೆಯ ಭಾಗೀರಥಿ ಅವರೆ ಈ ಅಪರೂಪದ ಸಾದಕಿ. ಕಳೆದ 40 ವರ್ಷಗಳಿಂದಲೂ ನಿರಂತರವಾಗಿ ಹೈನುಗಾರಿಕೆಯಲ್ಲಿ ತೊಡಗಿರುವ ಇವರು ದನಗಳ ಒಡನಾಟದಲ್ಲೇ ಸಾರ್ಥಕ ಬದುಕು ಕಂಡವರು. ಅವರ ಪತಿ ಹೇಮಂತ್ ಸುವರ್ಣ ಸಂಪೂರ್ಣ ಸಹಕಾರ ನೀಡುತ್ತಾರೆ.

ಮೂಲತಃ ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರು ಗ್ರಾಮದ ತಾರಾಬಳಿಯವರಾದ ಭಾಗೀರಥಿ ಹಳ್ಳಿ ಸೊಗಡಿನ ಹೆಣ್ಣು. ಮದುವೆಯಾಗಿ ಜೆಪ್ಪುವಿನ ಗಂಡನ ಮನೆಗೆ ಬಂದಾಗ ಹಳ್ಳಿಯ ಬದುಕಿಗೆ ಹೊಂದಿಕೊಂಡ ಇವರು ತಾಯಿ ಮನೆಯಿಂದ ದನವೊಂದನ್ನು ತಂದು ಸಾಕಿದರು. ಅಲ್ಲಿಂದ ಪ್ರಾರಂಭವಾಯಿತು ಹೈನುಗಾರಿಕೆ ದಿನಚರಿ. ಈಗ ಸುಮಾರು ಇಪ್ಪತೈದು ಜಸರ್ಿ ಹಾಗೂ ಎಚ್ಎಫ್ ದನಗಳನ್ನು ಸಾಕುತ್ತಿದ್ದು, ದಿನವೊಂದಕ್ಕೆ ಸುಮಾರು 40 ಲೀಟರು ಹಾಲು ಉತ್ಪಾದಿಸುತ್ತಿದ್ದಾರೆ. ಹಾಲನ್ನು ಡೈರಿಗೆ ಹಾಕುವ ಎಂದರೆ ನಗರದಲ್ಲಿ ಹಾಲಿನ ಡೈರಿ ಇರುವುದು ಕುಲಶೇಖರದಲ್ಲಿ , ಕೂಳೂರು ಮತ್ತು ದೇರಳಕಟ್ಟೆಯಲ್ಲಿ ಮಾತ್ರ ಜೆಪ್ಪುುನಿಂದ ಹಾಲನ್ನು ಡೈರಿಗೆ ಸರಬರಾಜು ಮಾಡಲು ಕಷ್ಟ . ಸಂತೆಯೊಳಗೊಂದು ಮನೆಯ ಮಾಡಿ ಶಬ್ಧಕ್ಕೆ ಹೆದರದಿರು ಎನ್ನುವ ನುಡಿಯಂತೆ ಎದೆಗುಂದದೆ ಇವರು ನಗರದಲ್ಲಿ ಸೈಕಲಿನಲ್ಲಿ ಮನೆ ಮನೆಗೆ ಹಾಲು ಮಾರಾಟ ಮಾಡಿದರೆ, ಕೆಲವರು ಮನೆಗೆ ಬಂದು ಹಾಲನ್ನು ಖರಿದಿಸುತ್ತಾರೆ.
ಹೊಸ ಮನೆ ನಿಮರ್ಿಸಿದರು.
ಮೊದಲು ತನ್ನ ಹಳೆಯ ಮನೆಯ ಎದುರುಗಡೆ ದನಗಳಿಗೆ ಕೊಟ್ಟಿಗೆ ನಿಮರ್ಿಸಿ ಸಾಕುತ್ತಿದ್ದರು ಆದರೆ ಇತ್ತೀಚೆಗೆ ಹೊಸ (ಆರ್ಸಿಸಿ) ಮನೆ ನಿಮರ್ಿಸುವಾಗ ಹೈನುಗಾರಿಕೆಯನ್ನು ಬಿಡಲು ಮನಸ್ಸು ಒಪ್ಪದೆ ತನ್ನ ಮನೆಯ ತಳಮಹಡಿಯಲ್ಲಿ ದನಗಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿ ಅಲ್ಲಿಯೇ ದನಗಳನ್ನು ಸಾಕುತ್ತಿದ್ದಾರೆ. ಇಲ್ಲಿ ದನದ ಸೆಗಣಿಗಾಗಿ ಪ್ರತ್ಯೇಕ ತಗ್ಗು ಗುಂಡಿಯನ್ನು ನಿಮರ್ಿಸಿ ಅದರಲ್ಲಿ ಸೆಗಣಿ ತುಂಬಿದ ನಂತರ ತೋಟದ ಮಾಲೀಕರಿಗೆ ಮಾರಾಟ ಮಡುತ್ತಾರೆ.
ಸವಲತ್ತುಗಳ ಕೊರತೆ:
ಇವರು ಡೈರಿಗೆ ಹಾಲನ್ನು ಸಾಗಿಸಲು ಕಷ್ಟವಾದುದರಿಂದ ಸರಕಾರದಿಂದ ಹೈನುಗಾರಿಕೆಗೆ ಸಿಗುವ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಹೈನುಗಾರಿಕೆಗೆ ಸಾಲದ ಸೌಲಭ್ಯ, ದನದ ಆಹಾರ ಹಿಂಡಿಗೆ ಸಬ್ಸಿಡಿ, ದನಗಳು ಸತ್ತರೆ ಪರಿಹಾರ ಸಿಗುತ್ತದೆ. ಆದರೆ ಇವರು ಡೈರಿಗೆ ಹಾಲನ್ನು ನೀಡುವುದಿಲ್ಲದರಿಂದ ಎಲ್ಲವನ್ನೂ ತನ್ನ ಸ್ವಂತ ಖಚರ್ಿನಿಂದ ಬರಿಸಬೇಕಾಗುತ್ತದೆ. ದನಗಳ ಅರೈಕೆಗಾಗಿ ತನ್ನ ಕುಟುಂಬದ ಸದಸ್ಯರ ಸಹಕಾರದ ಜತೆಗೆ ಒಬ್ಬ ಆಳನ್ನು ಮನೆಯಲ್ಲಿ ಇಟ್ಟುಕೊಂಡು ಹೈನುಗಾರಿಗೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಕಳೆದ ತಿಂಗಳು ಕಾಲುಬಾಯಿ ರೋಗ ಬಾಸಿಸುಮಾರು ಹತ್ತು ಹಸುಗಳು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದವ.ು ಈಗ ಮನೆಯಲ್ಲಿ ಇಪ್ಪತ್ತೈದರಲ್ಲಿ ಕೇವಲ ಹದಿನೈದು ದನಗಳನ್ನು ಮಾತ್ರ ಸಾಕುತ್ತಿದ್ದಾರೆ.
ಗೃಹ ಪ್ರವೇಶಕ್ಕೆ ದನಗಳ ಬಳಕೆ
ನಗರ ಪ್ರದೇಶದಲ್ಲಿ ಎಲ್ಲಿಯೇ ಅದರೂ ಹೊಸ ಮನೆಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಇವರ ಮನೆಯ ದನಗಳನ್ನು ಕೊಂಡುಹೋಗುತ್ತಾರೆ. ದನಗಳನ್ನು ಖುಷಿಯಿಂದ ಕಳುಹಿಸುವ ಭಾಗೀರಥಿ ಆ ದನಗಳಿಗೆ ಸಿಗುವ ಅಪರೂಪದ ಉಪಚಾರಗಳನ್ನು ಕಂಡು ಸಂತೋಷ ಪಡುತ್ತಾರೆ ಯಾರೇ ಬಂದರೂ ದನಗಳನ್ನು ಕಳುಹಿಸಿಕೊಡುತ್ತಾರೆ ಭಾಗೀರಥಿ.
ದನಗಳಿಗೆ ಬೇಕಾದ ಆಹಾರವನ್ನು ಬಂದರು, ಸೆಂಟ್ರಲ್ ಮಾಕರ್ೆಟ್ನಿಂದ ತರುತ್ತಿದ್ದಾರೆ. ಹಸಿರು ಹುಲ್ಲನ್ನು ಎಲ್ಲಿಂದಲೋ ಮಾರ್ಗದ ಬದಿಯಿಂದ ಕುಯ್ದು ತಂದು ದನಗಳಿಗೆ ಹಾಕುತ್ತಾರೆ. ನಗರ ಪ್ರದೇಶದಲ್ಲಿ ಬನಾನ ಚಿಪ್ಸ್ ಮಾಡುವವರ ಮನೆಗಳಿಂದ ಬಾಳೆಹಣ್ಣಿನ ಸಿಪ್ಪೆಯನ್ನು ತಂದು ದನಗಳಿಗೆ ಹಾಕುತ್ತಾರೆ.



good story
Good story keep it up
Hats off to you
Keep up the good work