ಮಂಗಳೂರು: ಮತಾಂತರ ತಡೆಯಲು ಕಠಿಣ ಮತಾಂತರ ನಿಷೇಧ ಕಾನೂನು, ಕೇರಳ ಸರಕಾರದ `ಅಂತಾರಾಷ್ಟ್ರೀಯ ಅರೇಬಿಕ್ ವಿಶ್ವವಿದ್ಯಾಲಯ’ ಸ್ಥಾಪಿಸುವ ನಿರ್ಧಾರವನ್ನು ತಕ್ಷಣ ರದ್ದುಗೊಳಿಸಬೇಕು ಮತ್ತು ತೆಲಂಗಾಣ ಹಾಗೂ ಪಂಜಾಬ್ ಸರಕಾರ `ಕ್ರೈಸ್ತ ಭವನ’ ಸ್ಥಾಪಿಸುವ ನಿರ್ಧಾರವನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಹಿಂದೂ ಆಂದೋಲನದ ವತಿಯಿಂದ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಷ್ಟ್ರೀಯ ಹಿಂದೂ ಆಂದೋಲನವನ್ನು ಮಾಡಲಾಯಿತು.
DSC01926

DSC01935

DSC01904

DSC01919
ಈ ವೇಳೆ ಮಾತಾಡಿದ ಆಂದೋಲನದ ಮುಖಂಡ ವಿವೇಕ ಪೈ  ಮತಾಂತರ ತಡೆಯಲು ಕಠಿಣ ಮತಾಂತರ ನಿಷೇಧ ಕಾನೂನು ಮಾಡಿ ಮತ್ತು ಅಲ್ಪಸಂಖ್ಯಾತರ ಓಲೈಕೆಯ ಮೇಲೆ ನಿಷೇಧ ಹೇರಬೇಕು. ಅಲ್ಲದೆ ಅಲ್ಪಸಂಖ್ಯಾತರಿಗ ಯಾವುದೇ ಅನುದನ ನೀಡಬಾರದು. ಪ್ರಸ್ತುತ ಇದನ್ನು ತಡೆಯಲು ಯಾವುದೇ ಸಕ್ಷಮ ಕಾನೂನುಗಳಿಲ್ಲದ್ದರಿಂದ ಅದರ ವಿರುದ್ಧ ಏನೂ ಮಾಡಲಾಗುವುದಿಲ್ಲ. ಹಾಗಾಗಿ ಅದರ ವಿರುದ್ಧ ಕಠಿಣ ಕಾನೂನಿನ ಆವಶ್ಯಕತೆ ಇದೆ. ಅದನ್ನು ಸರಕಾರ ಕೂಡಲೇ ಜಾರಿಗೆ ತರಬೇಕು ಎಂದರು.
ಹಿಂದೂ ಮಹಾಸಭಾ ವತಿಯಿಂದ   ಮಾತನಾಡುತ್ತಾ ಟಿಪ್ಪು ಸುಲ್ತಾನ ಒಬ್ಬ ಮತಾಂಧ, ಕ್ರೂರಿ ಅಂತಹ ವ್ಯಕ್ತಿಯ ಜನ್ಮದಿನ ಆಚರಣೆ ಮಾಡಬಾರದು ಎಂದು ನಾವು ಈಗಾಗಲೇ ಕಾರವಾರದಲ್ಲಿ ಹಿಂದೂ ಮಹಾಸಭಾ ವತಿಯಿಂದ ಪತ್ರಿಕಾ ಪರಿಷತ್ತನ್ನು ಕರೆದು ವಿರೋಧಿಸಿದ್ದೇವೆ ಎಂದರು.
ಶ್ರೀ ರಾಮ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಕುಮಾರ ಮಾಲೇಮಾರ, ರಾಷ್ಟ್ರೀಯ ಹಿಂದೂ ಆಂದೋಲನ ಉಪೇಂದ್ರ ಆಚಾರ್ಯ, ಹಿಂದೂ ಜನಜಾಗ್ರತಿ ಸಮಿತಿ ವಿಜಯಕುಮಾರ ಮುಂತಾದವರು ಮಾತಾಡಿದರು.
ಶ್ರೀ ಲೋಕೇಶ, ಮಡಿಕೇರಿ ಓಂಕಾರೇಶ್ವರ ದೇವಸ್ಥಾನದ ಅರ್ಚಕರಾದ ಪ್ರಸನ್ನಕುಮಾರ, ವೇಣುಗೋಪಾಲ, ನಾಗೇಶ ವಾಮಂಜೂರು, ರಾಜೇಶ ಪೂಜಾರಿ ಮತ್ತಿತರರು ಭಾಗವಹಿಸಿದ್ದರು. ಹಿಂದೂ ಜನಜಾಗ್ರತಿ ಸಮಿತಿ, ಸನಾತನ ಸಂಸ್ಥೆ, ಹಿಂದೂ ಮಹಾಸಭಾ, ಶ್ರೀ ರಾಮಸೇನೆ ಮುಂತಾದ ಹಿಂದೂ ಸಂಘಟಣೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *