ಸುದ್ದಿ9ಕೈಕಂಬ: ಸರಣಿ ಅಪಘಾತದಿಂದ ನಾಲ್ವರು ಗಾಯಗೊಂಡ ಘಟನೆ ಗುರುಪುರ ಕೈಕಂಬದ ಕೋರ್ದಬ್ಬು ದೈವಸ್ಥಾನದ ಸಮೀಪ ಜ.18ರ ಭಾನುವಾರ ಮೂರರ ಸುಮಾರಿಗೆ ನಡೆದಿದೆ. ಗಾಯಗೊಂಡವರನ್ನು ಕಂದಾವರ ಬೈಲ್ ನಿವಾಸಿಗಳಾದ ಕುಮಾರ್(35) ಹಾಗೂ ರವಿ(21), ಕಲ್ಲಡ್ಕ ನಿವಾಸಿಗಳಾದ ವಿನಯ್(26) ಹಾಗೂ ಕವಿತಾ(22) ಎಂದು ಗುರುತಿಸಲಾಗಿದೆ. ಈ ಪೈಕಿ ಕವಿತಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

18 vp car mathu bayk apagatha
1

 

18 car baykge dikki

2

3

4

8

9

18 car baykge dikki

18 vp car mathu bayk apagatha

ಘಟನೆಯ ವಿವರ: ಕೈಕಂಬದಿಂದ ಬಜ್ಪೆ ಕಡೆಗೆ ಸಾಗುತ್ತಿದ್ದ ಕಾರ್ ಕಿನ್ನಿಕಂಬಳದಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದು, ಬಳಿಕ ಕಂದಾವರ ಬೈಲ್ ರಸ್ತೆಯಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಈ ವೇಳೆ ಎರಡು ಬೈಕ್ಗಳಲ್ಲಿ ಬರುತ್ತಿದ್ದ ನಾಲ್ವರಿಗೆ ಗಾಯವಾಗಿದ್ದು ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಕಾರ್ ಕಮರಿಗೆ ಹೋಗಿ ಬಿದ್ದಿದ್ದು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಗಾಯಾಳುಗಳನ್ನು ಬಜರಂಗದಳದ ಮುಖಂಡ ಭುಜಂಗ ಕುಲಾಲ್ ಅವರು ತನ್ನ ಕಾರ್ನಲ್ಲಿ ಕುಳ್ಳಿರಿಸಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಜ್ಪೆ ಪೊಲೀಸರು ಸ್ಥಳಕ್ಕಾಗಮಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ

 

 

By suddi9

One thought on “ಸರಣಿ ಅಪಘಾತ: ನಾಲ್ವರ ಪೈಕಿ ಒಬ್ಬರು ಗಂಭೀರ”

Leave a Reply

Your email address will not be published. Required fields are marked *