ತ್ರಿಪುರಾ: ಹೆಣ್ಣು ಎಂಬ ಕಾರಣಕ್ಕೆ ತನ್ನ ಹತ್ತು ವರ್ಷದ ಪುಟಾಣಿ ಮಗಳನ್ನೇ ಬೆಂಕಿ ಹಚ್ಚಿ ಕೊಲ್ಲಲೆತ್ನಿಸಿದ ಧೂರ್ತ ತಂದೆಯನ್ನು ಸ್ಥಳೀಯರು ಸಖತ್ ಗೂಸಾ ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ಇತ್ತೀಚೆಗೆ ತ್ರಿಪುರಾದಲ್ಲಿ ನಡೆದಿದೆ. ಅಬ್ದುಲ್ ಹುಸೇನ್ ಎಂಬಾತನೇ ಈ ರೀತಿ ಕೃತ್ಯ ಎಸಗಿದ ಪಾಪಿ ತಂದೆ.

ಹೆಣ್ಣುಮಗು ಜನಿಸಿದ್ದಕ್ಕೆ ಬೇಸರಗೊಂಡಿದ್ದ ಅಬ್ದುಲ್ಲಾ ಹುಸೇನ್ ತನ್ನ ಮಗಳನ್ನು ಮನೆಯ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ಆಕೆಯ ಬಾಯಿಗೆ ಬಟ್ಟೆಗಳಿಂದ ತುರುಕಿದ್ದಾನೆ. ನತರ ಆಕೆಯ ಕೈಯ್ಯನ್ನು ಹಗ್ಗದಿಂದ ಕಟ್ಟಿ ಗಂಡಿ ತೋಡಿ ಆಕೆಯ ಕುತ್ತಿಗೆಯವರೆಗೆ ಮಣ್ಣು ಮುಚ್ಚಿದ್ದಾನೆ. ಇನ್ನೇನು ಬೆಂಕಿ ಹಚ್ಚಬೇಕೆನ್ನುವಷ್ಟರಲ್ಲಿ ಈತನ ಪತ್ನಿ ಅಲ್ಲಿಗಾಗಮಿಸಿದ್ದನ್ನು ಕಂಡು ಡ್ರಮ್ ಒಂದನ್ನು ತೆಗೆದು ಬಾಲಕಿಯ ತಲೆಗೆ ಮುಚ್ಚಿಟ್ಟಿದ್ದಾನೆ. ಪತ್ನಿ ತನ್ನ ಮಗಳು ಕಾಣೆಯಾಗಿರುವುದನ್ನು ಗಮನಿಸಿ ಊರವರನ್ನು ಸೇರಿಸಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ. ಪಾಪಿ ತಂದೆಯ ಕೃತ್ಯವನ್ನು ಗಮನಿಸಿದ ಸ್ಥಳಿಯರು ಆತನಿಗೆ ಹಿಗ್ಗಾಮಗ್ಗ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ ಎನ್ನಲಾಗಿದೆ.
