ಮಂಗಳೂರು: ಬಿಸಿಯೂಟದಲ್ಲಿ ವಿಷಾಹಾರ ಸೇವಿಸಿ ಸುಮಾರು 67 ಮಕ್ಕಳು ಅಸ್ವಸ್ಥರಾದ ಘಟನೆ ಮುಡಿಪು ಸಮೀಪದ ಕೀನ್ಯಾದ ಬೆಳರಿಂಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದಿದೆ. ಆಹಾರ ಸೇವಿಸಿದ ಮಕ್ಕಳು ತಲೆಸುತ್ತುವಿಕೆ ಜೊತೆಗೆ ವಾಂತಿ ಮಾಡಲು ಆರಂಭಿಸಿದ್ದು ಕೂಡಲೇ ಅವರನ್ನು ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಸಾಗಿಸಲಾಯಿತು. ಎಂಟು ಮಕ್ಕಳ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಐಸಿಯುನಲ್ಲಿ ದಾಖಲಿಸಲಾಯಿತು. ಆದರೆ ಸಂಜೆಯ ಹೊತ್ತಿಎಗ ಅವರು ಗುಣಮುಖರಾಗಿದ್ದಾರೆ. ಅಸ್ವಸ್ಥ ಮಕ್ಕಳ ಪೈಕಿ ಒರ್ವ ಬಾಲಕನ ಸ್ಥಿತಿ ಇನ್ನೂ ಕೂಡಾ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅನ್ನಕ್ಕಾಗಿ ಅಕ್ಕಿಯನ್ನು ಹೊಸ ಚೀಲದಿಂದಲೇ ತೆಗೆಯಲಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ರೇಖಾ ಅವರು ತಿಳಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.



