utk (1)ಮಂಗಳೂರು: ಎತ್ತಿನಹೊಳೆ ಯೋಜನೆಯು ಕಾಂಗ್ರೆಸ್ ಪಕ್ಷ ಜಾರಿಗೊಳಿಸುತ್ತಿರುವ ಯೋಜನೆಯಲ್ಲ ಬದಲಿಗೆ ಬಿಜೆಪಿ ಸರಕಾರದ ಸಮಯದಲ್ಲಿ ಜಾರಿಗೆ ಬಂದ ಯೋಜನೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ. ಡಿ.ವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಜಾರಿಗೆ ತರಲಾಗಿತ್ತು. ಯೋಜನೆಯನ್ನು ಜಾರಿಗೆ ತರುವಾಗಲೇ ಜಿಲ್ಲೆಯ ಶಾಸಕರು ವಿರೋಧ ವ್ಯಕ್ತಪಡಿಸಿದ್ದರೆ ಈ ಯೋಜನೆ ಜಾರಿಗೆ ಬರುತ್ತಿರಲಿಲ್ಲ. ಆಗ ಸುಮ್ಮನಿದ್ದ ವಿಜಯಕುಮಾರ್ ಶೆಟ್ಟಿಯವರು ಈಗ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಜಿಲ್ಲೆಗೆ ಹಾನಿಯುಂಟು ಮಾಡುವಂತ ಯೋಜನೆಗಳನ್ನು ನಾನು ಕೂಡಾ ವಿರೋಧಿಸುತ್ತೇನೆ.

ವೀರಪ್ಪ ಮೊಯ್ಲಿ ತಮ್ಮ ಕ್ಷೇತ್ರದ ಜನತೆಯ ಒಳಿತಿಗಾಗಿ ಯೋಜನೆಗೆ ಬೆಂಬಲ ಸೂಚಿಸಿದ್ದು ಅವರ ನಡೆ ಸರಿಯಾಗಿಯೇ ಇದೆ ಎಂದು ಖಾದರ್ ಸಮರ್ಥಿಸಿದರು. ಎತ್ತಿನಹೊಳೆ ಯೋಜನೆಯ ಬಗ್ಗ ತಮ್ಮ ನಿಲುವೇನೆಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಖಾದರ್ ಬಳಿ ಸ್ಪಷ್ಟ ಉತ್ತರವಿರಲಿಲ್ಲ.

By suddi9

Leave a Reply

Your email address will not be published. Required fields are marked *