ಪುತ್ತೂರು: ಎರಡು ಸಾವಿರ ವರ್ಷಗಳ ಹಿಂದೆ ಮುಸ್ಲಿಂ, ಕ್ರಿಶ್ಚನ್ ಇರಲಿಲ್ಲ, ಮತಾಂತರವೂ ಆಗುತ್ತಿರಲಿಲ್ಲ ಎಂದ ಅವರು ಇಂದು ಲವ್ ಜಿಹಾದ್ ಹೆಸರಿನಲ್ಲಿ ಮತಾಂತರದ ಷಡ್ಯಂತ್ರ ನಡೆಯುತ್ತಿದೆ, ಲ್ಯಾಂಡ್ ಜಿಹಾದ್, ಪೊಪ್ಯುಲೇಶ್ ಜಿಹಾದ್, ಬಾಂಬ್ ಜಿಹಾದ್ ನಡೆಯುತ್ತಿದ್ದು ಮುಂದಿನ ನೂರು ನೂರೈವತ್ತು ವರ್ಷಗಳ ಬಳಿಕ ಏನಾಗಬಹುದು ಎಂಬುದನ್ನು ಯೋಚಿಸಬೇಕಾಗಿದೆ ವಿಶ್ವಹಿಂದೂ ಪರಿಷತ್ ಅಂತರ್ರಾಷ್ಟ್ರೀಯ ಅಧ್ಯಕ್ಷ ಡಾ. ಪ್ರವೀಣ್ ಭಾ ತೊಗಾಡಿಯಾ ಹೇಳಿದರು. ಅವರು ಪುತ್ತೂರಿನ ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಶುಕ್ರವಾರ ಸಂಜೆ ನಡೆದ ವಿರಾಟ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ದೇಶದಲ್ಲಿ ಪ್ರಸ್ತುತ ಹಿಂದೂಗಳು ಸುರಕ್ಷಿತವಾಗಿಲ್ಲ, ಸುರಕ್ಷಿತವಾಗಿರಬೇಕಾದರೆ ಹಿಂದೂಗಳು ಬಹುಮತದಲ್ಲಿರಬೇಕು. ಈ ನಿಟ್ಟಿನಲ್ಲಿ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು 2 ಮಕ್ಕಳು ಎಂಬ ಕಾನೂನು ಎಲ್ಲರಿಗೂ ತರಬೇಕು. ಮತಾಂತರ ನಿಷೇಧ ಕಾನೂನು ಜಾರಿಗೊಳ್ಳಬೇಕು ಎಂದು ತೊಗಡಿಯಾ ಆಗ್ರಹಿಸಿದರು.

ಹಿಂದೂ ಎಂಬುದು ಜೀವನ ಪದ್ದತಿಯಾಗಿದೆ. ಭಾರತವನ್ನು ಹಿಂದೂ ರಾಷ್ಟ್ರವಾಗಿ ಉಳಿಸಿಕೊಳ್ಳಬೇಕಾಗಿದ್ದು, ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು ಬಹುಮತದಲ್ಲಿರುವಂತೆ ನೋಡಿಕೊಳ್ಳಬೇಕಾಗಿದೆ. ಮೂರು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೆಡೆಯುವ ಮೂಲಕ ಹಿಂದೂ ಸಮಾಜದ ಬಹುಮತ ಉಳಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದ ಅವರು ಹಿಂದೂಗಳ ಸುರಕ್ಷೆ, ಸಮೃದ್ಧಿ ಮತ್ತು ಗೌರವಕ್ಕಾಗಿ ಜಾಗೃತರಾಗಿ ಸಕ್ರಿಯ ಕಾರ್ಯವೆಸಗುವ ಬಗ್ಗೆ ಕಟಿಬದ್ದರಾಗಿ ಸಂಕಲ್ಪ ತೊಡಬೇಕಾಗಿದೆ ಎಂದರು.
ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾತಾಡಿ. ಯಾರೇ ಹಿಂದುಗಳು ಮತಾಂತರ ಮಾಡಿಲ್ಲ ಆದರೆ ಲವ್ಜಿಹಾದ್ ಹೆಸರಿನಲ್ಲಿ ಮುಸಲ್ಮಾನರಿಂದ ಮೋಸ ವಂಚನೆಯ ಡೋಂಗಿ ಷಂಡ್ಯತ್ರದಿಂದ ಮತಾಂತರ ನಡೆಯುತ್ತಿದೆ. ಮೋಸಕ್ಕೆ ನಾವು ಸಿಕ್ಕಿ ಬೀಳುತ್ತಿದ್ದೇವೆ. ಶಾಲಾ, ಆಸ್ಪತ್ರೆ, ಅನಾಥಾಶ್ರಮದ ಹೆಸರಿನಲ್ಲಿ ಕ್ರಿಶ್ಚನರಿಂದ ಮತಾಂತರ ಶಡ್ಯಂತ್ರ ನಡೆಯುತ್ತಿದೆ ಎಂದ ಅವರು ಗೋಸಾಗಾಟದ ಕಳ್ಳ ಕಬೀರ್ ಸತ್ತಾಗ ಅತ್ತ ಮಂದಿ ನಂದಿತ ಸತ್ತಾಗ ಏನೂ ಮಾತಾಡಿಲ್ಲ, ಹಿಂದೂ ಸತ್ತರೆ ಕಾಸಿಲ್ಲ, ಮುಸ್ಲಿಂ ಸತ್ತರೆ ಕಾಸು ಇದು ಯಾವ ನ್ಯಾಯ.ನಮ್ಮಲ್ಲಿ ಒಗ್ಗಟ್ಟಾಗಿ ಎದುರಿಸುವ ತಾಕತ್ತು ಬಂದಾಗ ಮಾತ್ರ ಹಿಂದೂ ಸಮಾಜಕ್ಕೆ ಗೌರವ ಪ್ರಾಪ್ತಿಯಾಗುತ್ತದೆ.
ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ ಹಿಂದೂ ವಿರೋಧಿಗಳನ್ನು ಸಮರ್ಥವಾಗಿ ಎದುರಿಸಲು ಗ್ರಾಮ ಮಟ್ಟದಲ್ಲಿ ಸಂಘಟಿತರಾಗಬೇಕಾಗಿದೆ ಎಂದರು.
ವೇದಿಕೆಯಲ್ಲಿ ವಿಎಚ್ಪಿ ಅಖಿತ ಭಾರತ ಉಪಾಧ್ಯಕ್ಷೆ ರಾಜಮಾತೆ ಚಂದ್ರಾಸಿಂಗ್ ದೇವಿ, ಸಂಘಟನೆಯ ಮುಖಂಡೆ ಮೀನಾಕ್ಷಿ ಪೇಶ್ವೆ, ವಿಎಚ್ಪಿ ಪ್ರಾಂತ ಸಹ ಕಾರ್ಯದಶರ್ಿ ಕೃಷ್ಣಮೂತರ್ಿ, ಉದ್ಯಮಿ ಕೂಡ್ಗಿ ಸುಧಾಕರ ಶೆಣೈ, ಬಂಟ್ವಾಳ ತಾ.ಪಂ. ಮಾಜಿ ಅಧ್ಯಕ್ಷ ಬಾಬು ಮೊಗೇರ, ಕನ್ಯಾನ ಬಾಳೆಕೋಡಿ ಶಿಲಾಂಜನೇಯ ಕ್ಷೇತ್ರದ ಶಶಿಕಾಂತ ಮಣಿ ಸ್ವಾಮಿ, ಬಜರಂಗದಳದ ಪ್ರಾಂತ ಸಂಚಾಲಕ ಶರಣ್ ಪಂಪುವೆಲ್, ಬಜರಂಗದಳ ಪುತ್ತೂರು ಜಿಲ್ಲಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಪ್ರಾಂತ ಸಹ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ವಿಎಚ್ಪಿ ಜಿಲ್ಲಾಧ್ಯಕ್ಷ ಡೀಕಯ್ಯ ಪೆರುವೋಡಿ ಮತ್ತಿತರರು ಉಪಸ್ಥಿತರಿದ್ದರು.
ವಿರಾಟ್ ಹಿಂದೂ ಹೃದಯ ಸಂಗಮ ಸಮಿತಿಯ ಅಧ್ಯಕ್ಷ ಡಾ. ಪ್ರಸಾದ್ ಭಂಡಾರಿ ಸ್ವಾಗತಿಸಿದರು. ಕಶೆಕೋಡಿ ಸೂರ್ಯನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಮೋಹನದಾಸ ಸ್ವಾಮೀಜಿ ಅವರು ಗೋಮಾತೆಗೆ ಮಾಲಾರ್ಪಣೆ ಮಾಡುವ ಮೂಲಕ ಗೋಪೂಜೆ ನಡೆಯಿತು.







