ಬಂಟ್ವಾಳ : ತಾಲೂಕು ಕೊಯಿಲ ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲಾ ಶತಮಾನೋತ್ಸವದ ಸಮಾರೋಪ ಕಾರ್ಯಕ್ರಮ ಮತ್ತು ಶತಾಬ್ದಿ ರಂಗ ಮಂದಿರ ಉದ್ಘಾಟನೆ ಮತ್ತು ಜ.17ರಂದು ಮತ್ತು ಜ.18ರಂದು ಹಿ.ಪ್ರಾ.ಶಾಲೆಯಲ್ಲಿ ಜರಗಲಿದೆ.
ಜ.17ರಂದು ಶನಿವಾರ ಬೆಳಗ್ಗೆ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಅವರು ಧ್ವಜಾವರೋಹಣ ಗೈಯ್ಯಲಿರುವರು. ಬಳಿಕ ಶಾಲಾ ಮಕ್ಕಳಿಂದ ಛದ್ಮವೇಷ ಸ್ಪರ್ಧೆ, ಬಹುಮಾನ ವಿತರಣೆ, ಮಧ್ಯಾಹ್ನ 3ರಿಂದ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ಶತಾಬ್ದಿ ರಂಗ ಮಂದಿರ ಹಾಗೂ ಸಭಾ ಕಾರ್ಯಕ್ರಮವನ್ನು ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಉದ್ಘಾಟಿಸಲಿರುವರು. ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರು ಅಧ್ಯಕ್ಷತೆ ವಹಿಸಲಿರುವರು. ಸಂಸದ ನಳಿನ್ ಕುಮಾರ್ ಕಟೀಲು, ತಾ.ಪಂ.ಅಧ್ಯಕ್ಷ ಯಶವಂತ ಡಿ., ಶಿವಮೊಗ್ಗ ಎಂ.ಎಲ್.ಸಿ. ಭಾರತಿ ಶೆಟ್ಟಿ , ಜಿ.ಪಂ.ಸದಸ್ಯೆ ನಳಿನಿ ಬಿ.ಶೆಟ್ಟಿ , ತಾ.ಪಂ.ಸದಸ್ಯ ವಸಂತ ಕುಮಾರ್ ಅಣ್ಣಳಿಕೆ, ರಾಯಿ ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಮಧುಕರ ಬಂಗೇರ ಅಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ|ಎಂ.ಮೋಹನ ಆಳ್ವ , ಬಂಟ್ವಾಳ ತಹಶೀಲ್ದಾರ್ ಮಹಮದ್ ಇಸಾಕ್, ತಾ.ಪಂ.ಕಾರ್ಯನಿರ್ವಹಣಾಕಾರಿ ಸಿಪ್ರಿಯಾನ್ ಮಿರಾಂದ, ಕ್ಷೇತ್ರ ಶಿಕ್ಷಣಾಕಾರಿ ಶೇಷಶಯನ ಕಾರಿಂಜ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿರುವರು.
ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೆ.ರಮೇಶ್ ನಾಯಕ್ ರಾಯಿ ಅವರನ್ನು ಸಮ್ಮಾನಿಸಲಾಗುವುದು. ಬಳಿಕ ರಾತ್ರಿ ಹಳೆ ವಿದ್ಯಾರ್ಥಿ ಗಳಿಂದ ಅರೆನ್ ಮುಟ್ಟರೆ ಆವಾ ಎಂಬ ತುಳು ನಾಟಕ ನಡೆಯಲಿದೆ.
ಜ.18ರಂದು ರವಿವಾರ ರಾತ್ರಿ ನಮ್ಮ ಕಲಾವಿದೆರ್ ಬೆದ್ರ ಅವರಿಂದ ನೆಟ್ವರೆ ತಿಕ್ಕುಜಿ ಎಂಬ ತುಳು ನಾಟಕ ನಡೆಯಲಿದೆ ಎಂದು ಶಾಲಾಭಿವೃದ್ಧಿ ಸಮಿತಿಯ ರಾಮಚಂದ್ರ ಶೆಟ್ಟಿಗಾರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
