ಬಂಟ್ವಾಳ ತಾಲೂಕಿನ ಜನತೆಯ ಬಹುವರ್ಷಗಳ ಬೇಡಿಕೆ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಬಿ. ರಮಾನಾಥ ರೈಯವರ ಹಲವು ವರ್ಷಗಳ ಕನಸು, ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ, ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಗೊಳ್ಳಲಿದೆ. ಇಂದು ಬಂಟ್ವಾಳ ತಾಲೂಕಿನ ಸಂಗಬೆಟ್ಟುವಿನಲ್ಲಿ ಶಿಲಾನ್ಯಾಸ ನೆರವೇರಲಿದೆ.

ಈ ಯೋಜನೆ ಸರ್ಕಾರದಿಂದ ಮಂಜೂರುಗೊಂಡಿದ್ದು ಮೊದಲ ಹಂತದಲ್ಲಿ ಎರಡು ಯೋಜನೆಗಳಿಗೆ ಶಿಲಾನ್ಯಾಸ ನಡೆಯಲಿದೆ. ನದಿ ತಟದಲ್ಲಿ ಜಾಕ್ವೆಲ್ ನಿರ್ಮಿಸಿ ಅಲ್ಲಿ ನದಿಯಿಂದ ಮೇಲೆತ್ತಲ್ಪಟ್ಟ ನೀರನ್ನು ಶುದ್ಧೀಕರಿಸಿ ಗ್ರಾಮಪಂಚಾಯತ್ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ನಿರ್ಮಿಸಿದ ಮೇಲ್ಮಟ್ಟದ ಜಲಸಂಗ್ರಹಣ ಟ್ಯಾಂಕ್ಗಳಿಗೆ ರವಾನಿಸಿ ಗ್ರಾಮಗಳಲ್ಲಿ ಈಗಾಗಲೇ ಇರುವ ಟ್ಯಾಂಕ್ಗಳಿಗೆ ಪೂರೈಕೆ ಮಾಡುವ ಯೋಜನೆ ಇದಾಗಿದೆ. ದಿನದ 24 ಗಂಟೆಗಳ ಕಾಲವೂ ನೀರು ಲಭ್ಯವಾಗುವ ನಿರೀಕ್ಷೆ ಇದ್ದು ಗ್ರಾಮೀಣ ಭಾಗದ ಜನರ ನೀರಿನ ಸಮಸ್ಯೆ ನೀಗಲಿದೆ. ನೀರು ಬಳಕೆದಾರರಿಗೆ ವಿದ್ಯುತ್ ಮೀಟರ್ ಬಳಕೆ ಕಡ್ಡಾಯಗೊಳಿಸುವ ಬಗ್ಗೆ ನಿರ್ಧರಿಸಲಾಗಿದ್ದು ಇದರಿಂದ ನೀರಿನ ಮಿತ ಬಳಕೆ ಸಾಧ್ಯವಾಗಲಿದ್ದು ಬಳಕೆದಾರರಲ್ಲಿ ಜಾಗೃತಿಯೂ ಮೂಡಲಿದೆ. ಈ ಯೋಜನೆಯ ಮೂಲಕ ನದಿಯ ಯಾವುದೇ ಭಾಗದಿಂದ ಅಥವಾ ಈಗಾಗಲೇ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟುಗಳಿಂದ ನೀರು ಪಡೆಯುವ ಅವಕಾಶವನ್ನು ಸಕರ್ಾರ ನೀಡಿದೆ. ಇದರ ವ್ಯವಸ್ಥಿತ ಕಾರ್ಯನಿರ್ವಹಣೆಗೆ ಜನಪ್ರತಿನಿಗಳ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
ಸಂಗಬೆಟ್ಟು ಯೋಜನೆ:
ಬಂಟ್ವಾಳ ತಾಲೂಕಿನ ಸಂಗಬೆಟ್ಟು , ಕುಕ್ಕಿಪಾಡಿ, ಚೆನ್ನೈತ್ತೋಡಿ, ರಾಯಿ, ಪಂಜಿಕಲ್ಲು ಹಾಗೂ ಅಮ್ಟಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಗ್ರಾಮಗಳ 65 ಜನವಸತಿ ಪ್ರದೇಶಗಳಿಗೆ ಈ ಯೋಜನೆಯ ಮೂಲಕ ಕುಡಿಯುವ ನೀರು ಪೂರೈಕೆಯಾಗಲಿದೆ. 2901.83 ಲ.ರೂ.ಅಂದಾಜು ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. 6 ಗ್ರಾಮಪಂಚಾಯತ್ನ 16 ಗ್ರಾಮಗಳು ಈ ಯೋಜನೆಯ ವ್ಯಾಪ್ತಿಯಲ್ಲಿ ಬರಲಿದ್ದು. 66 ಜನವಸತಿ ಪ್ರದೇಶದ 55,600 ಜನಸಂಖ್ಯೆಗೆ ಈ ಯೋಜನೆ ಪ್ರಯೋಜನಕಾರಿಯಾಗಲಿದೆ. ಸಂಗಬೆಟ್ಟು ಗ್ರಾಮದ ಪುಚ್ಚಮೊಗರು ಬಳಿ ಹರಿಯುವ ಫಲ್ಗುಣಿ ನದಿಯನ್ನು ಜಲಮೂಲವಾಗಿ ಈ ಯೋಜನೆಗೆ ಬಳಸಿಕೊಳ್ಳಲಿದ್ದು ಕೆರೆಬಳಿ ಎಂಬಲ್ಲಿ 6 ಮೀ. ವ್ಯಾಸದ, 5.00 ಎಂಎಲ್ಡಿ(50 ಲಕ್ಷ ಲೀಟರ್) ಸಾಮಥ್ರ್ಯದ ನೀರಿನ ಶುದ್ಧೀಕರಣ ಘಟಕ ನಿರ್ಮಾಣಗೊಳ್ಳಲಿದೆ. ಸಂಗಬೆಟ್ಟುವಿನಲ್ಲಿ 3.25 ಲಕ್ಷ ಲೀಟರ್, ಪಂಜಿಕಲ್ಲು ಪದವಿನಲ್ಲಿ 4.50 ಲಕ್ಷ ಲೀಟರ್, ಬೆಂಜನಪದವಿನಲ್ಲಿ 0.50 ಲಕ್ಷ ಲೀಟರ್ ಸಾಮಥ್ರ್ಯದ ಮೇಲ್ಮಟ್ಟದ ಜಲಸಂಗ್ರಹಣ ಟ್ಯಾಂಕ್ ನಿರ್ಮಾಣಗೊಳ್ಳಲಿದೆ.
ಕುಕ್ಕಿಪಾಡಿ ಸಬ್ಸ್ಟೇಷನ್ನಿಂದ ನಿರಂತರ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮೊಗರೋಡಿ ಕನ್ಸ್ಟ್ರಕ್ಷನ್ನ ಶ್ರೀ ಸುಧಾಕರ ಶೆಟ್ಟಿ ಅವರು ಇದರ ಗುತ್ತಿಗೆ ವಹಿಸಿಕೊಂಡಿದ್ದು ಪಂಚಾಯತ್ರಾಜ್ ಕಿರಿಯ ಅಭಿಯಂತರ ಶ್ರೀ ಜಗದೀಶ ನಿಂಬಾಳ್ಕರ್ ಅವರ ಉಸ್ತುವಾರಿಯಲ್ಲಿ ಮತ್ತು ಗ್ರಾ.ಕು.ನೀ. ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯ ನಿರ್ವಾ ಹಕ ಅಭಿಯಂತರ ಶ್ರೀ ಜಯಪ್ರಕಾಶ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀ ಗಿರೀಶ್ ಕೆ.ಪಿ.ಅವರ ಮೇಲ್ವಿಚಾರಣೆಯಲ್ಲಿ ಕಾಮಗಾರಿ ನಡೆಯಲಿದೆ.
ಯೋಜನೆಯ ಅಗತ್ಯತೆ
*ದ.ಕ.ಜಿಲ್ಲೆಯ ಭೌಗೋಳಿಕ ಪರಿಸ್ಥಿತಿ ಏರು ತಗ್ಗು ಪ್ರದೇಶದಿಂದ ಕೂಡಿದ್ದು ರಾಜ್ಯದ ಉಳಿದ ಜಿಲ್ಲೆಗಳಿಗಿಂತ ಭಿನ್ನವಾಗಿದೆ. *ಕೊಳವೆ ಬಾವಿಗಳಿಂದ ಶಾಶ್ವತವಾಗಿ ಕುಡಿಯುವ ನೀರು ಒದಗಿಸಲು ಅಸಾಧ್ಯ. * ಈಗಿರುವ ಯೋಜನೆಗಳಲ್ಲಿ ಕೆಲವು ಕಡೆ ಶುದ್ಧೀಕರಣ ಘಟಕ ಇಲ್ಲದೆ ಶುದ್ಧ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. * ಕೊಳವೆ ಬಾವಿಗಳನ್ನು ಅತಿ ಆಳವಾಗಿ ಕೊರೆಯುವುದರಿಂದ ಅಂತರ್ಜಲ ಕಡಿಮೆಯಾಗುತ್ತದೆ. ಮತ್ತು ನೀರಿನಲ್ಲಿ ಫ್ಲೋರೈಡ್ ಅಂಶ ಏರಿಕೆಯಾಗಿ ಕುಡಿಯಲು ಯೋಗ್ಯವಾಗಿರುವುದಿಲ್ಲ. * ಅಲ್ಲಲ್ಲಿ ನೀರು ಪೂರೈಸುವಾಗ ಪೈಪುಗಳು ಒಡೆಯುವುದು ಸಾಮಾನ್ಯ. ಇದನ್ನು ತಡೆಗಟ್ಟಲು ಯೋಜನೆ ಅವಶ್ಯ. *ಎತ್ತರ ಪ್ರದೇಶದ ಮನೆಗಳಿಗೆ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ. ಪೈಪ್ ದುರಸ್ತಿ, ವಿದ್ಯುತ್ ಬಿಲ್ ಪಾವತಿಸಲು ಗ್ರಾ.ಪಂ.ಗಳಿಗೆ ಕಷ್ಟ ಪರಿಸ್ಥಿತಿ.* ಲೋ ವೋಲ್ಟೇಜ್ ಸಮಸ್ಯೆ ಇಲ್ಲ.
ಪ್ರಯೋಜನಗಳು:
*ಹರಿದು ಹೋಗುವ ನದಿ ನೀರನ್ನು ತಡೆಗಟ್ಟಿ ನೀರು ಪೂರೈಸುವುದರಿಂದ ನೀರು ಪೋಲಾಗುವುದಿಲ್ಲ. ಇದರಿಂದ ಪರಿಸರದ ಪ್ರದೇಶದಲ್ಲಿ ಅಂತರ್ಜಲ ಏರಿಕೆಯಾಗುತ್ತದೆ. * ಈಗಾಗಲೇ ಲಭ್ಯವಿರುವ ಅಣೆಕಟ್ಟಿನಿಂದ ನೀರು ಪೂರೈಕೆ ಮಾಡುವುದರಿಂದ ಅಣೆಕಟ್ಟು ನಿಮರ್ಿಸುವ ಅಗತ್ಯವಿರುವುದಿಲ್ಲ. *ಗ್ರಾ.ಪಂ.ವ್ಯಾಪ್ತಿಯ ಅತೀ ಎತ್ತರ ಪ್ರದೇಶದಲ್ಲಿ ಟ್ಯಾಂಕ್ ನಿಮರ್ಾಣ ಮಾಡುವುದರಿಂದ ಹಲವು ಗ್ರಾಮಗಳ ಎತ್ತರ ಪ್ರದೇಶಕ್ಕೂ ನೀರು ಪೂರೈಕೆ ಸಾಧ್ಯ. * ಡೀಸೆಲ್ ಜನರೇಟರ್ ಬಳಸಿ 24 ಗಂಟೆಯೂ ಶುದ್ಧೀಕರಿಸಿದ ನೀರು ಪೂರೈಕೆ ಸಾಧ್ಯ. ವಿದ್ಯುತ್ ಸಮಸ್ಯೆ ಇದ್ದರೂ ಹಲವಾರು ಗ್ರಾಮಗಳಿಗೆ ನೀರು ಪೂರೈಕೆ. * ನಿಮರ್ಾಣ ವೆಚ್ಚ ಕಡಿಮೆ.
ಬಾಕ್ಸ್ ಎಂಡ್
ಸಚಿವ ರೈ ಅವರ ಮಹತ್ವಾಕಾಂಕ್ಷೆಯ ಯೋಜನೆ
ಈ ಯೋಜನೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ಕನಸಿನ ಕೂಸು. ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗದ ಜನರನ್ನು ಕಾಡುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡುವ ನಿಟ್ಟಿನಲ್ಲಿ ಅವರು ಕಳೆದ 13 ವರ್ಷಗಳ ಕಾಲ ನಡೆಸಿದ ನಿರಂತರ ಪ್ರಯತ್ನ ಈಗ ಫಲ ನೀಡುತ್ತಿದೆ. ಈ ಹಿಂದೆ ಕಿನ್ನಿಗೋಳಿಯಲ್ಲಿ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಗೊಳಿಸಿದಾಗ ದ.ಕ. ಜಿಲ್ಲೆಗೆ ಈ ಯೋಜನೆ ಅಗತ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಜನತೆಯ ಅಗತ್ಯತೆಯ ದೃಷ್ಟಿಯಿಂದ ಆಗ ಶಾಸಕರಾಗಿದ್ದ ಶ್ರೀ ಬಿ. ರಮಾನಾಥ ರೈ ಅವರು ವಿಶೇಷ ಮುತವರ್ಜಿ ವಹಿಸಿ, ಸಂಬಂಧಪಟ್ಟ ಇಲಾಖೆಯ ಅಕಾರಿಗಳ ಮನವೊಲಿಸಿ ಯೋಜನೆಯನ್ನು ಇಲ್ಲಿಗೆ ತರಿಸಿಕೊಳ್ಳುವಲ್ಲಿ ವಿಶೇಷ ಪ್ರಯತ್ನ ನಡೆಸಿದ್ದಾರೆ.
ಬಡವರ ಆಶಾಕಿರಣವಾಗಿ, ಸರಳ ಸಜ್ಜನಿಕೆಯ ರಾಜಕಾರಣಿಯಾಗಿ, ಸಮಾಜದ ಎಲ್ಲಾ ವರ್ಗದ ಜನರ ಬಾಂಧವ್ಯವನ್ನು ಹೊಂದಿ, ರಾಜ್ಯ ಸರಕಾರದ ಸಚಿವರಾಗಿ ಸತ್ಯ-ಧರ್ಮ-ನಿಷ್ಠೆಯಿಂದ ಸಮಾಜ ಸೇವೆಗೈಯ್ಯುವ ನಿಸ್ವಾರ್ಥ ಜನನಾಯಕ, ಬಂಟ್ವಾಳದ ಜನಪ್ರಿಯ ಶಾಸಕರು. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಹರಿಕಾರರಾಗಿರುವ ಮತ್ತು ಕ್ಷೇತ್ರದಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತಿರುವ ಶ್ರೀ ಬಿ.ರಮಾನಾಥ ರೈ ಅವರನ್ನು ಸಂಗಬೆಟ್ಟು ಜನತೆ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರ
ಶಿಲಾನ್ಯಾಸ ಕಾರ್ಯಕ್ರಮ
ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಬಿ.ರಮಾನಾಥ ರೈ ಅವರು ಶಿಲಾನ್ಯಾಸ ನೆರವೇರಿಸಿ ಅಧ್ಯಕ್ಷತೆ ವಹಿಸುವರು. ವಿಧಾನಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಜಿ.ಪಂ. ಅಧ್ಯಕ್ಷೆ ಶ್ರೀಮತಿ ಆಶಾ ತಿಮ್ಮಪ್ಪ ಗೌಡ, ಸಂಸದ ಶ್ರೀ ನಳಿನ್ ಕುಮಾರ್ ಕಟೀಲು, ವಿಧಾನಪರಿಷತ್ ಸದಸ್ಯ ಶ್ರೀ ಐವನ್ ಡಿ’ಸೋಜ, ಜಿ.ಪಂ.ಸಿಇಓ ಶ್ರೀಮತಿ ತುಳಸಿಮದ್ದಿನೇನಿ, ತಾ.ಪಂ. ಅಧ್ಯಕ್ಷ ಶ್ರೀ ಯಶವಂತ ದೇರಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿ.ಪಂ.ಸದಸ್ಯೆ ಶ್ರೀಮತಿ ನಳಿನಿ ಬಿ.ಶೆಟ್ಟಿ , ತಾ.ಪಂ.ಉಪಾಧ್ಯಕ್ಷೆ ಶ್ರೀಮತಿ ವಿಲಾಸಿನಿ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಐಡಾ ಸುರೇಶ್, ಸಂಗಬೆಟ್ಟು ತಾ.ಪಂ.ಸದಸ್ಯೆ ಶ್ರೀಮತಿ ರೇವತಿ ಆರ್. ಪೂಜಾರಿ,ಅಮ್ಟಾಡಿ ತಾ.ಪಂ.ಸದಸ್ಯ ಶ್ರೀ ಎಫ್ರೆಮ್ ಸಿಕ್ವೇರಾ, ಚೆನ್ನೈತ್ತೋಡಿ ತಾ.ಪಂ.ಸದಸ್ಯ ಶ್ರೀ ರಮೇಶ್ ಕುಡುಮೇರು, ರಾಯಿ ತಾ.ಪಂ.ಸದಸ್ಯ ಶ್ರೀ ವಸಂತ ಕುಮಾರ್, ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಸುಶೀಲ, ಕುಕ್ಕಿಪ್ಪಾಡಿ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ವಿಶಾಲಾಕ್ಷಿ , ಚೆನ್ನೈತ್ತೋಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮೋಹಿನಿ ಹರೀಶ್, ರಾಯಿ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಇಂದಿರಾ, ಅಕ್ಷಕ ಅಭಿಯಂತರರು, ಮೈಸೂರು ಶ್ರೀ ರಂಗನಾಥ ನಾಯಕ್, ತಾ.ಪಂ.ಕಾರ್ಯನಿವರ್ಾಹಕ ಅಕಾರಿ ಶ್ರೀ ಸಿಪ್ರಿಯನ್ ಮಿರಾಂದ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.
