ಸುದ್ದಿ9  ಮೂಡುಬಿದಿರೆ : ರಾಜೀವಗಾಂಧಿಆರೋಗ್ಯ ವಿಜ್ಞಾನ ವಿ.ವಿ. ಬೆಂಗಳೂರು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕರ್ನಾಟಕ ಸರಕಾರ ಇವರುಗಳ ಸಹಯೋಗದೊಂದಿಗೆ ಜನವರಿ16 ರಿಂದ20ರವರೆಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ 75ನೇ ಅಖಿಲ ಭಾರತಅಂತರ್ ವಿ.ವಿ. ಅಥ್ಲೆಟಿಕ್ಸ್ ಕ್ರೀಡಾಕೂಟ ಜರುಗಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅವಿಭಜಿತದ.ಕ.ಜಿಲ್ಲೆಯಲ್ಲಿಎರಡನೇ ಬಾರಿಗೆ ಈ ಬೃಹತ್‍ಕ್ರೀಡಾಕೂಟ ನಡೆಯುತ್ತಿದ್ದುದೇಶದ ಸುಮಾರು 200 ವಿಶ್ವವಿದ್ಯಾನಿಲಯಗಳು ಸುಮಾರು 3500 ಕ್ರೀಡಾಪಟುಗಳ ಸಾಮಥ್ರ್ಯ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಂಡಿದೆ. ಕ್ರೀಡಾಕೂಟದಲ್ಲಿ 23 ಕ್ರೀಡೆಗಳು ನಡೆಯಲಿದೆ. ಇದೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಫೋಟೋ ಫಿನಿಶಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಂತಿಮ ಸ್ಪರ್ಧೆಗಳನ್ನು ಹೊನಲು ಬೆಳಕಿನಲ್ಲಿ ನಡೆಸಲಾಗುವುದು. ಕ್ರೀಡಾಕೂಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದವರಿಗೆ ಆಳ್ವಾಸ್ ಸಂಸ್ಥೆಯ ವತಿಯಿಂದ ತಲಾ 10,7,5 ಸಾವಿರ ನಗದು ಬಹುಮಾನ ನೀಡಲಾಗುವುದು. ಕೂಟ ದಾಖಲೆ ಮಾಡಿದವರಿಗೆ 25 ಸಾವಿರ ರೂ ನಗದು ನೀಡಲಾಗುವುದು. ಈ ಹಿಂದೆ ವಿಶೇಷ ಕ್ರೀಡಾ ಸಾಧಕರಿಗೆ ಹಾಗೂ ಕ್ರೀಡಾ ತರಬೇತುದಾರರನ್ನು, ಕ್ರೀಡಾ ಸಂಘಟಕರನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಗುವುದು. ಮುಂದಿನ ಎಪ್ರಿಲ್‍ನಲ್ಲಿ ಉತ್ತರ ಕೊರಿಯಾದ ಗಂಜಾಲ್‍ನಲ್ಲಿ ನಡೆಯಲಿರುವ ವಿಶ್ವ ವಿವಿಗಳ ಒಲಂಪಿಕ್ ಕ್ರೀಡಾ ಕೂಟಕ್ಕೆ ಭಾರತೀಯ ಕ್ರೀಡಾ ತಂಡದ ಆಯ್ಕೆ ಪ್ರಕ್ರಿಯೆಯು ಇಲ್ಲಿ ನಡೆಯಲಿದೆ. ಅಂದು ಸಂಜೆ ವೆಂಕಟರಮಣ ದೇವಾಲಯದ ಬಳಿಯಿಂದ ಸುಮಾರು 200 ವಿವಿಗಳ ಕ್ರೀಡಪಟುಗಳು ಮತ್ತು ಸಾಂಸ್ಕ್ರತಿಕ ತಂಡಗಳಿಂದ ವೈಭವದ ಮೆರವಣಿಗೆಯ ಮೂಲಕ ಕ್ರೀಡಾಪಟುಗಳನ್ನು ಬರಮಾಡಿಕೊಳ್ಳಲಾಗುವುದು. ಎಂದು ಅವರು ಹೇಳಿದರು.
ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ
ಈ ಕ್ರೀಡಾಕೂಟವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯದ ಕ್ರೀಡಾ ಸಚಿವರಾದ ಅಭಯಚಂದ್ರಜೈನ್ ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಯಾಗಿ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡೆಸ್‍ರವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಅರಣ್ಯ ಸಚಿವ ರಮಾನಾಥ ರೈ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶರುದ್ರಪ್ಪ ಪಾಟೀಲ, ಆರೋಗ್ಯ ಸಚಿವಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಸಂಸದ ನಳಿನ್‍ಕುಮಾರ್ ಕಟೀಲ್ ಆಗಮಿಸಲಿದ್ದಾರೆ.
ಕ್ರೀಡಾಕೂಟದಲ್ಲಿ ಧ್ವಜಾರೋಹಣವನ್ನು ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಉಪಕುಲಪತಿ ಪ್ರೊ.ಕೆ.ಎಸ್.ರವೀಂದ್ರನಾಥ ನೆರವೇರಿಸಿಕೊಡಲಿದ್ದಾರೆ.
ಅತಿಥಿಗಳಾಗಿ ಕರ್ನಾಟಕರಾಜ್ಯ ಅಥ್ಲೆಟಿಕ್ ಅಸೋಸಿಯೇಶನ್‍ನ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಶಾಸಕ ಕ್ಯಾ| ಗಣೇಶ್ ಕಾರ್ಣಿಕ್, ವಿಧಾನಪರಿಷತ್ ಸದಸ್ಯ ಐವಾನ್ ಡಿ’ಸೋಜಾ, ಮಾಜಿ ಸಚಿವ ಅಮರನಾಥ್ ಶೆಟ್ಟಿ, ದಕ್ಷಿಣಕನ್ನಡಜಿಲ್ಲಾ ಪೋಲೀಸ್ ಕಮಿಶನರ್ ಎಸ್.ಮುರುಗನ್, ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಮಂಗಳೂರು ವಿವಿಯ ಉಪಕುಲಪತಿ ಪ್ರೊ.ಭೈರಪ್ಪ, ಮೂಡುಬಿದಿರೆಯ ಪುರಸಭಾಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಭಾರತೀಯ ವಿವಿಗಳ ಸಂಘದ ಕಾರ್ಯದರ್ಶಿ ಗುರುದೀಪ್ ಸಿಂಗ್, ಭಾರತೀಯ ಅಥ್ಲೆಟಿಕ್ ಫೆಡರೇಶನ್ ಕಾರ್ಯದರ್ಶಿ ಪಿ.ಕೆ.ವ್ಯಾಲ್ಸನ್, ತಮಿಳುನಾಡು ಕ್ರೀಡಾ ವಿಶ್ವವಿದ್ಯಾಲಯದ ನಿರ್ದೇಶಕ ವೈದ್ಯನಾಥನ್, ಗುಂಟೂರಿನ ನಾಗಾರ್ಜುನ ವಿಶ್ವವಿದ್ಯಾಲಯದದೈಹಿಕ ಶಿಕ್ಷಣ ನಿರ್ದೇಶಕಡಾ.ಕಿಶೋರ್, ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಶೇಷಣ್ಣರವರನ್ನು ಆಹ್ವಾನಿಸಲಾಗಿದೆ.
ಈ ಕ್ರೀಡಾಕೂಟದಲ್ಲಿ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟುಗಳು ತಮ್ಮ ಪೂರ್ಣ ಸಾಮಥ್ರ್ಯವನ್ನುತೋರ್ಪಡಿಸಲುಅನುಕೂಲವಾಗುವಂತೆ ಕಳೆದೆರಡು ತಿಂಗಳುಗಳಿಂದ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ನಡೆಯುತ್ತಿದ್ದು ಸಿದ್ಧತೆ ಈಗಾಗಲೇ ಅಂತಿಮ ಹಂತದಲ್ಲಿದೆ.ಈ ಮೂಲಕ ಹೆಚ್ಚಿನ ದಾಖಲೆಗಳು ಮೂಡಿಬರುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಅವಿಭಜಿತದ.ಕ.ಜಿಲ್ಲೆ, ರಾಜ್ಯಅಥ್ಲೆಟಿಕ್ಸ್ ಸಂಸ್ಥೆ, ರಾಜೀವ್‍ಗಾಂಧಿ ವಿವಿ, ಉಡುಪಿ ಜಿಲ್ಲೆಗಳ ಕ್ರೀಡಾ ನಿರ್ದೇಶಕರು-ಅಧಿಕಾರಿಗಳು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ಈ ಕ್ರೀಡಾಕೂಟದ ಸಂಘಟನೆಯಲ್ಲಿ ತೊಡಗಿಸಿ, ಅಖಿಲ ಭಾರತ ವಿ.ವಿ. ಇತಿಹಾಸದಲ್ಲೇ ಯಶಸ್ವಿ ಕ್ರೀಡಾಕೂಟವಾಗಿ ಸಂಘಟಿಸಬೇಕೆಂಬುದು ನಮ್ಮಅಭಿಲಾಷೆ ಎಂದು ಅವರು ತಿಳಿಸಿದರು.
mbd_jan12_8 (1)

By Suddi9

Leave a Reply

Your email address will not be published. Required fields are marked *