ಬೆಂಗಳೂರು: 16 ವರ್ಷದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯವಾಗಿದೆ. ಬೆಂಗಳೂರಿನ ಕಾಟನ್ ಪೇಟೆ ನಿವಾಸಿ, ಹಾರ್ಡ್ವೇರ್ ಮಳಿಗೆ ಮಾಲೀಕನ 16 ವರ್ಷದ ಮಗನನ್ನು ಓರ್ವ ಬಾಲಾಪರಾಧಿ ಸೇರಿದಂತೆ ನಾಲ್ವರು ಜನವರಿ 10ರಂದು ಶಾಲೆ ಬಳಿಯಿಂದಲೇ ಅಪಹರಿಸಿ 10 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು.

ಬಾಲಕನ ಬಳಿ ಇದ್ದ ಮೊಬೈಲ್, ಹಣ ಕಸಿದು ಅಪಹರಣಕಾರರು ಬಾಲಕನನ್ನು ಥಳಿಸಿದ್ದರು. ಕಿಡ್ನ್ಯಾಪ್ ಮಾಡಿ ಕರೆದೊಯ್ಯುವಾಗ ಮೂರ್ತ ವಿಸರ್ಜನೆ ನೆಪದಲ್ಲಿ ಬಾಲಕ ಅಪಹರಣಕರರಿಂದ ತಪ್ಪಿಸಿಕೊಂಡಿದ್ದ. ಬಳಿಕ ಪೋಷಕರೊಂದಿಗೆ ತೆರಳಿ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ಘಟನೆ ನಡೆದ 2 ದಿನದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ತವಕಲ್, ನಸೀರ್, ಶಾಬಾಚ್ ಬಂಧಿತ ಆರೋಪಿಗಳು. ಶಾಬಾಚ್ ಬಾಲಕನ ತಂದೆಯ ಹಾರ್ಡ್ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನುವುದು ಇಲ್ಲಿ ವಿಶೇಷ.
