ಸುದ್ದಿ 9 ಬಂಟ್ವಾಳ: ಇಲ್ಲಿನ 6 ಗ್ರಾ.ಪಂ. ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ 5 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಮೇಲುಗೈ ಸಾಧಿಸಿದೆ. ಮಂಚಿ ಗ್ರಾ.ಪಂ ಮಾತ್ರ ಬಿಜೆಪಿ ಪಾಲಾಗಿದೆ. ಕಳೆದ ಬಾರಿ ಬಿಜೆಪಿಯ ಸ್ವಾಧೀನದಲ್ಲಿದ್ದ ಸರಪಾಡಿ ಮತ್ತು ಕಡೇಶ್ವಾಲ್ಯ ಗ್ರಾ.ಪಂ ಕೂಡಾ ಕಾಂಗ್ರೆಸ್ ಮಡಿಲಿಗೆ ಬಿದ್ದಿದೆ. ಮಂಚಿಯಲ್ಲಿ ಬಿಜೆಪಿಯ ಕೆ. ಗಣೇಶ್ ಐತಾಳ್ ಗೆಲುವು ದಾಖಲಿಸಿದ್ದಾರೆ. ಉಳಿದಂತೆ ಕರಿಯಂಗಳ ಗ್ರಾ.ಪಂ-ವೃಂದಾಕ್ಷಿ, ಕರಿಯಂಗಳ ಗ್ರಾ.ಪಂ-ನಾರಾಯಣ, ಸರಪಾಡಿ-ಗೀತಾ, ಕಡೇಶ್ವಾಲ್ಯ-ಅಪೋಲಿನ್ ಪಿಂಟೊ, ವಿಟ್ಲ-ಪಡ್ನೂರು-ಮೋಹಿನಿ ಶಿವರಾಂ ಗೆಲುವು ಸಾಧಿಸಿದ್ದಾರೆ
