ನವದೆಹಲಿ: ಪ್ಯಾರಿಸ್ ನ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಉಗ್ರರಿಗೆ 51 ಕೋಟಿ ರುಪಾಯಿ ಬಹುಮಾನ ಘೋಷಿಸಿದ್ದ ಬಿ.ಎಸ್.ಪಿ ಉಗ್ರ ಇದೀಗ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ಯಾರಿಸ್ ನಲ್ಲಿ ಉಗ್ರರು ನಡೆಸಿದ ದಾಳಿಯ ಕುರಿತು ಉಗ್ರರಿಗೆ ಬಹುಮಾನ ಘೋಷಿಸುವ ಮೂಲಕ ಹುರಿದುಂಬಿಸಿದ್ದ ಬಹುಜನ ಸಮಾಜ ಪಕ್ಷದ ಶಾಸಕ ಹಜಿ ಯಾಕೂಬ್ ಖುರೇಶಿ ವಿರುದ್ಧ ಉತ್ತರ ಪ್ರದೇಶದ ಪೆÇಲೀಸರು ಬಂಧನ ವಾರೆಂಟ್ ಜಾರಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಯಾಕೂಬ್ ಇದೀಗ ತಲೆಮರೆಸಿಕೊಂಡಿದ್ದಾನೆ.

ಮಹಮದ್ ಪೈಗಂಬರ್ ಅವರನ್ನು ಅವಮಾನಿಸಿದರೆ ಸಾವಿನ ಮೂಲಕವೇ ಉತ್ತರಿಸಬೇಕು. ಉಗ್ರರು ಮಾಡಿದ್ದು ಸರಿ ಎಂದಿದ್ದ ಯಾಕೂಬ್ ಖುರೇಶಿ ಉಗ್ರರಿಗೆ 51 ಕೋಟಿ ರೂಪಾಯಿ ಬಹುಮಾನ ಘೋಷಿಸಿ ವಿವಾದಕ್ಕೀದಾಗಿದ್ದ. ಅಲ್ಲದೇ ಆತನ ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
2006ರಲ್ಲಿ ಮೀರತ್ ಸಾರ್ವಜನಿಕ ಸಭೆಯಲ್ಲೇ ಪ್ರವಾದಿ ಮೊಹಮ್ಮದ್ ಅವರ ವಿವಾದಾತ್ಮಕ ವ್ಯಂಗ್ಯ ಚಿತ್ರ ಚಿತ್ರಿಸಿದ್ದ ಡ್ಯಾನಿಶ್ ವ್ಯಂಗ್ಯಚಿತ್ರಕಾರನ ಹತ್ಯೆಗೆ 51 ಕೋಟಿ ರುಪಾಯಿ ಬಹುಮಾನ ಘೋಷಿಸಿದ್ದ ಯಾಕೂಬ್ ಖುರೇಶಿ ವಿರುದ್ದ ಇದೀಗ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತಲೆ ಮರೆಸಿಕೊಂಡಿರುವ ಆತನ ಪತ್ತೆಗೆ ಮುಂದಾಗಿದ್ದಾರೆ.
