ಮೂಡುಬಿದರೆ: ಸರೋದ್ ಮಾಂತ್ರಿಕ ಅಮ್ಜದ್ ಅಲಿಖಾನ್ಗೆ ಆಳ್ವಾಸ್ ವಿರಾಸತ್-2015 ಪ್ರಶಸ್ತಿಯನ್ನು ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ನಲ್ಲಿ ಪ್ರದಾನ ಮಾಡಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ನಡೆಯುವ ಆಳ್ವಾಸ್ ವಿರಾಸತ್-2015 ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅಮ್ಜದ್ ಅಲಿಖಾನ್ ಅವರನ್ನು ಸನ್ಮಾನಿಸಲಾಯಿತು.

ಸ್ವರವೇ ಈಶ್ವರ. ಸಂಗೀತ ವಿಶ್ವವನ್ನು ಸಂಪರ್ಕಿಸುವ ಮಾಧ್ಯಮ. ಇಂತಹ ಶ್ರೇಷ್ಠ ಸಂಗೀತಕ್ಕೆ ದಕ್ಷಿಣ ಭಾರತದಲ್ಲಿ ವಿಶಿಷ್ಟ ಮಹತ್ವವಿದೆ ಎಂದರು.
ಆಳ್ವಾಸ್ ವಿರಾಸತ್ ರೂವಾರಿ ಡಾ.ಎಂ.ಮೋಹನ್ ಆಳ್ವ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಾ.ವಿನಯ್ ಹೆಗ್ಡೆ, ಜಯರಾಮ್ ಭಟ್, ರಾಜೇಂದ್ರ ಪ್ರಸಾದ್ ಮೊದಲಾವರು ಉಪಸ್ಥಿತರಿದ್ದರು
