ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ನಲ್ಲಿ ಜ8ರಿಂದ 11 ರವರೆಗೆ ಆಳ್ವಾಸ್ ವಿರಾಸತ್2015 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ಗೆ ಗುರುವಾರ ಸಂಜೆ ಚಾಲನೆ ದೊರೆಯಲಿದೆ. ಈ ಸುಸಂದರ್ಭದಲ್ಲಿ ಖ್ಯಾತ ಸರೋದ್ ವಾದನ ಮಾಂತ್ರಿಕ ಪದ್ಮಭೂಷಣ ಉಸ್ತಾದ್ಅಮ್ಜದ್ಆಲಿಖಾನ್ ಅವರಿಗೆ ಒಂದು ಲಕ್ಷ ರೂ ಗೌರವ ನಗದು ಸಹಿತ 2015ನೇ ಸಾಲಿನ ‘ಆಳ್ವಾಸ್ ವಿರಾಸತ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ರಾಜರ್ಶಿ  ಡಾ.ಡಿ.ವೀರೇಂದ್ರ ಹೆಗ್ಗಡೆ ವಿರಾಸತ್ ಉದ್ಘಾಟಿಸಲಿದ್ದಾರೆ.
Alvas Virasat Photos (8)

Alvas Virasat Photos (7)
ಸಾಂಸ್ಕೃತಿಕ ಸದಬಿರುಚಿಯ ಪ್ರೇಕ್ಷಕ ಸಮೂಹವನ್ನು ಕಟ್ಟುವ ಮಹದಾಸೆಯಿಂದ ಕಳೆದ ಎರಡು ದಶಕಗಳಿಂದ ತನ್ನದೇ ಆಳ್ವಾಸ್ ವಿರಾಸತ್ ಎನ್ನುವ ಬೆಡಗು ಲಾಲಿತ್ಯಗಳ ಮನ ಮೋಹಕ ರಾಷ್ಟೋತ್ಸವವನ್ನು ಜಗದಗಲ ಜನಮೆಚ್ಚುವ ರೀತಿಯಲ್ಲಿ ಅನಾವರಣಗೊಳಿಸಿರುವ ಡಾ, ಮೋಹನ ಆಳ್ವರ ವಿರಾಸತ್ಗೆ ಶೋಭೆ ಏರಿದ್ದೇ ಶೋಭಾವನದಲ್ಲಿ. ತನ್ನದೇ ಆಳ್ವಾಸ್ ಆಲಂಕಾರಿಕ ಶೈಲಿಯಲ್ಲಿ ವಿಶಿಷ್ಠ ದೀಪಾಲಂಕಾರ, ಸಮಯಪ್ರಜ್ಞೆ, ಸೌಂದರ್ಯ ಪ್ರಜ್ಞೆಯಿಂದ ಗೆದ್ದವಿರಾಸತ್ ಕಡಲತಡಿಯ ಕರಾವಳಿಯ ಈ ಬಿದಿರಿನ ಬೀಡಿಗೆ ರಾಷ್ಟ್ರದ ಶ್ರೇಷ್ಠ ನಾಗರಿಕ ಪ್ರಶಸ್ತಿ ಪುರಸ್ಕೃತ ಕಲಾವಿದರನ್ನೂ ಸೆಳೆದು ಆದರಿಸಿರುವುದು ವಿಶೇಷ.
ನಿಸರ್ಗದ ಮಡಿಲಲ್ಲಿ ಕಲಾ ಚಿಕಿತ್ಸೆಯ ವಿಶೇಷ ಕೊಡುಗೆಯಾಗಿ ಮೂಡಿಬರುವ ವಿರಾಸತ್ಗೆ ವಿದೇಶೀ ಕಲಾಭಿಮಾನಿಗಳೂ ಆಸಕ್ತಿಯಿಂದ ಸೇರಿಕೊಳ್ಳುವುದು ಗಮನಾರ್ಹ, ವಿಶ್ವವಿರಾಸತ್ ಮೂಲಕ ವಿದ್ಯಾಗಿರಿಗೆ ಬಂದ ವಿರಾಸತ್ ಇದೀಗ ಮತ್ತಷ್ಟು ಹೊಸತನಗಳೊಂದಿಗೆ ಕಲಾರಸಿಕರ ಮನಸೆಳೆಯಲು ಸಜ್ಜಾಗಿದೆ.
ನಿಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಎನ್. ವಿನಯ ಹೆಗ್ಡೆ, ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯ ಅರಣ್ಯ ಪರಿಸರ ಮತ್ತು ವನ್ಯ ಜೀವಿ ಇಲಾಖಾ ಸಚಿವ ಬಿ,ರಮಾನಾಥ ರೈ,ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯ ಚಂದ್ರ ಜೈನ್, ಆರೋಗ್ಯ ಸಚಿವ ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ,ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ದ.ಕ ಜಿಲ್ಲಾ ಸಾಂಸದ ನಳಿನ್ ಕುಮಾರ್ ಕಟೀಲ್ , ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ , ಬೆಂಗಳೂರು ಕೆನರಾ ಬ್ಯಾಂಕ್ ಪ್ರಧಾನ ಕಛೇರಿ, ಕಾರ್ಯ ನಿರ್ವಾಹಕ ನಿರ್ಧೇಶಕ ವಿ.ಎಸ್. ಕೃಷ್ಣ ಕುಮಾರ್,ಕರ್ನಾಟಕ ಬ್ಯಾಂಕ್ ಲಿ. ಆಡಳಿತ ನಿರ್ಧೇಶಕರು ಮತ್ತು ಸಿ.ಇ.ಓ, ಪಿ.ಜಯರಾಮ ಭಟ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿಯ ಅಧ್ಯಕ್ಷ ನಾಡೋಜ ಜಿ.ಶಂಕರ್,ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್,ರಾಜೇಂದ್ರ ಕುಮಾರ್ , ಸುರೇಶ್ ಭಂಡಾರಿ ಮುಂಬೈ ಗೌರವ ಉಪಸ್ಥಿತಿಯಲ್ಲಿ ಉದ್ಘಾಟನೆ , ಪ್ರಶಸ್ತಿ ಪ್ರದಾನ ನಡೆಯಲಿದೆ.

ಶಾಸ್ತ್ರೀಯ -ಜಾನಪದ ಕಲರವ :
ನಾಲ್ಕು ದಿನಗಳ ಕಾಲ ನಡೆಯುವ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ, ಜನಪದ ಸಂಗೀತ, ನೃತ್ಯಗಳು ಮೇಳೈಸಲಿದ್ದು ಕಣ್ಮನಗಳನ್ನು ತಣಿಸಲಿವೆ. ರಾಜಸ್ಥಾನದ ಶಾಸ್ತ್ರೀಯ ಹಾಗೂ ಜನಪದ ಕಲಾತಂಡದಡೆ ಸಟರ್್ ಸ್ಟೋಮರ್್, ಶ್ರೀರಾಮ ನಾಟಕ ನಿಕೇತನ, ಆಂಧ್ರಪ್ರದೇಶದ 25 ವಿದ್ಯಾರ್ಥಿಗಳ ವಿಶೇಷ ನೃತ್ಯ ಪ್ರದರ್ಶನ, ಪಂಜಾಬಿ ನೃತ್ಯ ವೈವಿಧ್ಯ, ಗುಜರಾತಿ ನೃತ್ಯ ವೈವಿಧ್ಯ, ಸ್ಟ್ರಿಂಗ್ ಸ್ಟ್ರಕ್-ಪೂರ್ವ-ಪಶ್ಚಿಮ ಅಪೂರ್ವವಾದನ ಸಂಗಮ, ಕಲೈಮಾಮಣಿ ಶಿವಮಣಿ ಮೊದಲಾದ ಮಹಾನ್ ಕಲಾವಿದರ ವಾದನ ಸಂಗಮ ‘ಮಹಾಲೀಲ’, ಮೈಸೂರು ಮಂಜುನಾಥ್ ತಂಡದ ‘ನಾದಲೋಕ’, ಕನರ್ಾಟಕದ ಆಯ್ದ 30 ಯುವ ಪುರಷಕಲಾವಿದರಿಂದ ಪ್ರಪ್ರಥಮ ಬಾರಿಗೆ ‘ನೃತ್ಯಪುರುಷ ಸಂಯೋಗ’ ಕಾರ್ಯಕ್ರಮಗಳು ಶಾಸ್ತ್ರೀಯ-ಜಾನಪದ ಆಸಕ್ತ ಪ್ರೇಕ್ಷಕರ ಮನಸ್ಸನ್ನು, ಕಣ್ಣುಗಳನ್ನು ತಣಿಸಲಿವೆ.
ಆಳ್ವಾಸ್ ವಿರಾಸತ್ನಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳಾಗಿ ಶಿವಮಣಿ ಬಳಗದ “ಮಹಾಲೀಲ” ಅಂಧ ಕಲಾವಿದರ ರಸಸಂಜೆ, ವಿಕಲಚೇತನರ ಸಾಹಸ ನೃತ್ಯ ಪ್ರದರ್ಶನ, ಜನವರಿ 9 ಶುಕ್ರವಾರ ರಾತ್ರಿ 8.30ಕ್ಕೆ ಸುಪ್ರಸಿದ್ಧ ಕಲಾವಿದರುಗಳಾದ ಕಲೈಮಾಮಣಿ ಶಿವಮಣಿ (ವಿಶ್ವದ ವಿವಿಧ ತಾಳವಾದ್ಯಗಳು), ಬಾಲ ಬಾಸ್ಕರ್ (ವಯೋಲಿನ್) ಮತ್ತು ಸ್ಟೀಫನ್ ದೇವಸ್ಸೀ (ಕೀಬೋಡರ್್) ಇವರುಗಳು ನೆರೆದಿರುವ ಜನಸ್ತೋಮವನ್ನು ರಂಜಿಸಲಿದ್ದಾರೆ.
ಜನವರಿ 10 ಶನಿವಾರ ಮುಂಬೈನ 30 ಮಂದಿ ಅಂಧ ಕಲಾವಿದರಿಂದ ‘ಅಖಿಯೋಂ ಕೆ ಝರೋಂಕೋ ಸೆ’ ಎಂಬ ಚಿತ್ರಗೀತೆಗಳ ರಸಸಂಜೆ ಕಾರ್ಯಕ್ರಮ ಹಾಗೂ ನವದೆಹಲಿಯ ವಿಕಲಚೇತನ ಕಲಾವಿದರ ವ್ಹೀಲ್ಚೆಯರ್ ಸಾಹಸ ನೃತ್ಯ ಪ್ರದರ್ಶನ ‘ಮಿರಾಕಲ್ಸ್ ಆನ್ ವ್ಹೀಲ್ಸ್’ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷವಾಗಿ ಆಳ್ವಾಸ್ ವಿರಾಸತ್ನ ಪ್ರೇಕ್ಷಕರ ಮನಸೂರೆಗೊಳ್ಳಲಿವೆ.
ಆಳ್ವಾಸ್ ವಿರಾಸತ್ 2015ರ ವಿಶೇಷ ಆಕರ್ಷಣೆಗಳು:
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ನಾಲ್ಕೂ ದಿನಗಳು ಪಂಜಾಬಿನ ಫತೇಆರ್ಮ್ರ ಬ್ಯಾಂಡ್ಕಲೆಯ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸುವಂತೆ ವರ್ಣಮಯ ನೀರ ಝರಿಗಳನ್ನು ನಿರ್ಮಾಣಮಾಡಲಾಗಿದೆ. ಆವರಣದ ತುಂಬೆಲ್ಲಾ ವಿಶಿಷ್ಟವೂ, ವೈವಿಧ್ಯಮಯವೂ ಆಗಿರುವ ನೈಜ ಪುಪ್ಪಪ್ರದರ್ಶನವನ್ನುಏರ್ಪಡಿಸಲಾಗುತ್ತದೆ. ಕಣ್ಮನ ಸೂರೆಗೊಳ್ಳುವ ಆಳ್ವಾಸ್ನ ವಿಶಿಷ್ಟ ದೀಪಾಲಂಕಾರದ ವೈಭವವನ್ನು ಆಳವಡಿಸಲಾಗುತ್ತದೆ.

ಆಳ್ವಾಸ್ ವಿರಾಸತ್ನಲ್ಲಿ …..
600ಕ್ಕೂ ಮಿಕ್ಕಿದ ಕಲಾವಿದರ ಸಂಗಮ
ಜ2ರಿಂದ 11ರವರೆಗೆ ರಾಷ್ಟ್ರಮಟ್ಟದ ಆದಿವಾಸಿ ಕಲಾವಿದರ ಚಿತ್ರಕಲಾ ಶಿಬಿರ
ಜ6ರಿಂದ 11ರವರೆಗೆ ರಾಷ್ಟ್ರಮಟ್ಟದ ಸಮಕಾಲೀನ ಕಲಾವಿದರ ಚಿತ್ರಕಲಾ ಶಿಬಿರ
(ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ವಿದ್ಯಾಗಿರಿಯ ನುಡಿಸಿರಿ ಸಭಾಂಗಣದಲ್ಲಿ ಕಲಾಕೃತಿಗಳ ರಚನಾ ನೈಪುಣ್ಯ ವೀಕ್ಷಣೆಗೆ ಅವಕಾಶವಿದೆ.)
ಮೂಡುಬಿದಿರೆ ವಿದ್ಯಾಗಿರಿಯ ಪ್ರಕೃತಿ ರಮಣೀಯ ಪ್ರಶಾಂತ ವಾತಾವರಣದ ಬೆಟ್ಟದ ಮೇಲಿನ ವಿಶಾಲ ಪ್ಯಾಲೇಸ್ ಗ್ರೌಂಡ್ನಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
15 ಸಾವಿರಕ್ಕೂ ಮಿಕ್ಕಿದ ಆಸನ ವ್ಯವಸ್ಥೆ
ಮನಸೂರೆಗೊಳ್ಳುವ ವರ್ಣಮಯ ನೀರಿನ ಝರಿಗಳು
ಪಂಜಾಬಿನ ಫತೇಆಮರ್ಿ ಬ್ಯಾಂಡ್ ಕಲೆಯ ವಿಶೇಷ
ಕಣ್ಮನ ಸೆಳೆಯುವ ದೀಪಾಲಂಕಾರದ ವೈಭವ ಶುಚಿ ರುಚಿಯಾದ ತಿಂಡಿ ತಿನಿಸುಗಳ ಮಳಿಗೆಗಳು
ಆಕರ್ಷಕ ಸುಡುಮದ್ದು ಪ್ರದರ್ಶನ
ಆವರಣದ ತುಂಬೆಲ್ಲ ವೈವಿಧ್ಯಮಯ ಪುಷ್ಪ ಪ್ರದರ್ಶನ
ಪ್ರತೀದಿನ ಸಂಜೆ 5ರಿಂದ ನಿಶ್ಮಿತಾ ಟವರ್ಸ್ ಬಳಿಯಿಂದ ವಿದ್ಯಾಗಿರಿಗೆ ಹಾಗೂ ಕಾರ್ಯಕ್ರಮದ ಬಳಿಕ ಮೂಡುಬಿದಿರೆಗೆ ಉಚಿತ ಬಸ್ಸುಗಳ ವ್ಯವಸ್ಥೆ

ಆಳ್ವಾಸ್ ವಿರಾಸತ್ ಪ್ರಶಸ್ತಿ ಪುರಸ್ಕ್ರತರು:

2006:ಪದ್ಮಭೂಷಣ ಸೋನಾಲ್ ಮಾನ್ ಸಿಂಗ್-ಒಡಿಸ್ಸಿ ನೃತ್ಯಗಾತರ್ಿ,
2007:ಪದ್ಮಶ್ರೀ ಝಾಕೀರ್ ಹುಸೇನ್-ತಬ್ಲಾ ಪಟು,
2008:ಪದ್ಮಶ್ರೀ ಕದ್ರಿ ಗೋಪಾಲನಾಥ್-ಹೆಸರಾಂತರ ಸ್ಯಾಕ್ಸೋಪೋನ್ ಗಾಯಕ,
2009: ಪಂಡಿತ್ ಹರಿಪ್ರಸಾದ್ ಚೌರಾಸಿಯಾ-ಪ್ರಸಿದ್ಧ ಕೊಳಲು ವಾದಕ,
2010:ಪದ್ಮವಿಭೂಷಣ ಬಾಲಮುರಳೀಕೃಷ್ಣ-ಖ್ಯಾತ ಗಾಯಕರು,
2011:ಪದ್ಮಭೂಷಣ ಕೆ.ಜೆ.ಜೇಸುದಾಸ್-ಖ್ಯಾತ ಗಾಯಕರು,
2012:ಪದ್ಮಶ್ರೀ ಅಜೋಯ್ ಚಕ್ರವತರ್ಿ -ಹಿಂದೂಸ್ಥಾನಿ ಗಾಯಕ,
2013: ಪದ್ಮಭೂಷಣ ಡಾ.ಪದ್ಮಾಸುಬ್ರಮಣ್ಯಂ-ದಕ್ಷಿಣ ಭಾರತದ ಶಾಸ್ತ್ರೀಯ ನರ್ತಕಿ
2013: ಪದ್ಮಶ್ರೀ ಪದ್ಮಭೂಷಣ ಡಾ| ತೀಜನ್ ಬಾಯಿ, ಪಾಂಡ್ವಾನಿ ಸಂಗೀತ ಕಲಾವಿದೆ, ಛತ್ತೀಸ್ಗಢ
( ಆಳ್ವಾಸ್ ವಿಶ್ವ ವಿರಾಸತ್ 2013 ಪ್ರಶಸ್ತಿ )
2014: :ಪದ್ಮವಿಭೂಷಣ ಉಸ್ತಾದ್ ಅಮ್ಜದ್ ಆಲಿ ಖಾನ್, ಸರೋದ್ ವಾದಕರು ನವದೆಹಲಿ

By Suddi9

Leave a Reply

Your email address will not be published. Required fields are marked *