ಸುದ್ದಿ9 ಮೂಡುಬಿದರೆ: ಭಾರತ ಸೇವಾದಳ ತಾಲೂಕು ಮಂಗಳೂರು, ಮೂಡುಬಿದರೆ ವಲಯ ಹಾಗೂ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಪ್ರಾಂತ್ಯ ಮೂಡುಬಿದರೆ ಇವುಗಳ ಆಶ್ರಯದಲ್ಲಿ ಮೂಡುಬಿದರೆ ವಲಯ ಮಟ್ಟದ ಮಕ್ಕಳ ಭಾವೈಕ್ಯ ಮೇಳ 2014-15 ಮಂಗಳವಾರ ಪ್ರಾಂತ್ಯ ಶಾಲೆಯಲ್ಲಿ ನಡೆಯಿತು.
ಮೂಡುಬಿದರೆ ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಭಾವೈಕ್ಯ ಮೇಳವನ್ನು ಉದ್ಘಾಟಿಸಿ ವಿದ್ಯೆಯ ಜತೆಗೆ ಮಕ್ಕಳಲ್ಲಿ ಶಿಸ್ತು, ರಾಷ್ಟ್ರ ಪ್ರೇಮ ಬೆಳೆಯಲು ಭಾವೈಕ್ಯ ಮೇಳಗಳು ಸಹಕಾರಿ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಭಾರತ ಸೇವಾದಳದ ತಾಲೂಕು ಸಮಿತಿ ಅಧ್ಯಕ್ಷ ಪ್ರಭಾಕರ ಶ್ರೀಯಾನ್ ಪೂರ್ವಾಹ್ನ ಧ್ವಜಾರೋಹನಗೈದರು. ಸೇವಾದಳದ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ ಪುರ ಮೆರವಣಿಗೆಯನ್ನು ಉದ್ಘಾಟಿಸಿದರು.
ಸಂಜೆ ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸೇವಾ ದಳದಲ್ಲಿ ಉತ್ತಮ ಕೆಲಸಗಳನ್ನು ಮಾಡಿರುವ ಕಲ್ಲಮಂಡ್ಕೂರು ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ಮೋಂತಿನಾ ಡಿಸೋಜಾ, ಬಿಆರ್‍ಪಿ ಪ್ರೌಢಶಾಲೆಯ ಶಿಕ್ಷಕ ಜನಾರ್ಧನ ನಾಯ್ಕ್, ವರ್ಣಬೆಟ್ಟು ಸ.ಹಿ.ಪ್ರಾ. ಶಾಲೆಯ ಶಿಕ್ಷಕಿ ಜಾನಕಿ ಹಾಗೂ ಸೇವಾದಳಕ್ಕೆ ಪ್ರೋತ್ಸಾಹ ನೀಡಿರುವ ಉದ್ಯಮಿ ಸುರೇಶ್ ಪ್ರಭು ಅವರನ್ನು ಭಾರತ ಸೇವಾದಳದ ವತಿಯಿಂದ ಸನ್ಮಾನಿಸಲಾಯಿತು.
ಭಾ.ಸೇ.ದಳ ಕೇಂದ್ರ ಸಮಿತಿಯ ಸದಸ್ಯ ಅಲ್ಫೋನ್ಸ್ ಫ್ರಾಂಕೊ, ಹಳೆ ವಿದ್ಯಾರ್ಥಿನಿ ಉಷಾಕಿರಣ್, ನಿವೃತ್ತ ಶಿಕ್ಷಕಿ ಭವಾನಿ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯದರ್ಶಿ ಉದಯ ಕುಮಾರ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ಪ್ರಾಂತ್ಯ ಪ್ರಾ.ಶಾಲೆಯ ಮುಖ್ಯೋಪಾಧ್ಯಾಯ ಆನಂದ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಾಂತ್ಯ ಪ್ರೌ.ಶಾಲೆಯ ಮುಖ್ಯ ಶಿಕ್ಷಕಿ ಬಿ.ರಾಜಶ್ರೀ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಿಕ್ಷಕ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಸೇವಾದಳದ ಪ್ರೇಮ್‍ಚಂದ್ ವಂದಿಸಿದರು.ಮೂಡುಬಿದರೆ ವಲಯದ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಮಾರು 600 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಕವಾಯತುಗಳು ನಡೆದವು. ಮೂಡುಬಿದರೆ ವಲಯ ಮಟ್ಟದ ಮಕ್ಕಳ ಭಾವೈಕ್ಯ ಮೇಳಕ್ಕೆ ಚಾಲನೆ ನೀಡಲಾಯಿತು. ಮಕ್ಕಳ ಭಾವೈಕ್ಯ ಮೇಳದ ಪ್ರಯುಕ್ತ ಪುರಮೆರವಣಿಗೆ ನಡೆಯಿತು.


