ನವದೆಹಲಿ: ಅನ್ಯಧರ್ಮೀಯರು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದುವುದೇ ನಿಜವಾದ ಘರ್ ವಾಪಸಿ ಎಂದು ಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿರುವುದು ಸಾಕಷ್ಟು ವಿವಾದಕ್ಕೆ ಕಾರಣನಾಗಿದೆ.
ಮಗು ಹುಟ್ಟುವಾಗಲೇ ಇಸ್ಲಾಂ ಆಗಿಯೇ ಹುಟ್ಟುತ್ತದೆ, ಎಲ್ಲ ಧರ್ಮೀಯರಿಗೆ ಇಸ್ಲಾಂ ನಿಜವಾದ ಮನೆಯಿದ್ದಂತೆ ಎಂದಿರುವ ಒವೈಸಿ ಇಸ್ಲಾಂ ಅನ್ನು ಅಪ್ಪಿಕೊಳ್ಳುವುದೇ ನಿಜವಾದ ಘರ್ ವಾಪಸಿ ಎಂದು ತಾನು ಭಾಗವಹಿಸಿದ್ದ ಈದ್ ಮಿಲಾದ್ ಸಭೆಯಲ್ಲಿ ತಿಳಿಸುವ ಮೂಲಕ ಘರ್ಷಣೆಗೆ ನಾಂದಿ ಹಾಡಿದ್ದಾರೆ.
ಇದೇ ಸಮಯದಲ್ಲಿ ಆರ್ ಎಸ್ ಎಸ್ ಬಗೆಗೆ ಕಿಡಿಕಾರಿರುವ ಒವೈಸಿ`ಘರ್ ವಾಪಸಿ’ ಹೆಸರಿನಲ್ಲಿ ಪ್ರಚಾರ ನಡೆಸುತ್ತಿರುವ ಹಿಂದೂ ಸಂಘಟನೆಗಳು ಮತಾಂತರಗೊಳ್ಳುವಂತೆ ಮುಸ್ಲಿಮರಿಗೆ 5 ಲಕ್ಷ ರೂ. ಮತ್ತು ಕ್ರೈಸ್ತರಿಗೆ 2 ಲಕ್ಷ ರೂ. ಆಮಿಷವೊಡ್ದುತ್ತಿವೆ. ಆದರೆ ಜಗತ್ತಿನ ಎಲ್ಲ ಸಂಪತ್ತನ್ನೂ ನೀಡಿದರೂ ಮುಸ್ಲಿಮರು ಮಾತ್ರ ಎಂದಿಗೂ ಇಸ್ಲಾಂ ತೊರೆಯುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಇವರು ಮುಸ್ಲಿಂ ಮತಾಂಧರ ರೀತಿ ಹೇಳಿಕೆ ಕೊಡುತ್ತಿದ್ದು, ಪೊಲೀಸರು ಐದು ನಿಮಿಷ ನೀಡಿದರೆ ಎಲ್ಲಾ ಹಿಂದೂಗಳನ್ನು ನಿರ್ನಾಮ ಮಾಡುತ್ತೇನೆ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
