ಮೂಡುಬಿದಿರೆ:ಪುತ್ತಿಗೆ ಗ್ರಾಮದ ಪುಲರ್ೊಟ್ಟು ಕಾಡು ಬಳಿ ಎಂಬಲ್ಲಿ ಶುಕ್ರವಾರ ಸಂಜೆ ಬೃಹತ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಓರ್ವ ಅಯ್ಯಪ್ಪ ವೃತಧಾರಿ ಸಹಿತ ಮೂವರನ್ನು ಬಂಧಿಸಿದ್ದು ನಾಲ್ವರು ಪರಾರಿಯಾಗಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಒಂದು ಬೊಲೆರೊ ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜುಗಾರಿ ಅಡ್ಡೆಯಲ್ಲಿ ಮೂವರು ಅಯ್ಯಪ್ಪ ಮಾಲಾಧಾರಿಗಳಿದ್ದು ಅವರಲ್ಲಿ ಓರ್ವ ಪೊಲೀಸರ ವಶವಾಗಿದ್ದು ಮತ್ತಿಬ್ಬರು ತಪ್ಪಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್ಸ್ಪೆಕ್ಟರ್ ಅನಂತಪದ್ಮನಾಭ ನೇತೃತ್ವದ ಪೊಲೀಸರ ತಂಡ ಜುಗಾರಿ ಅಡ್ಡೆಗೆ ದಾಳಿ ನಡೆಸಿದಾಗ ರಂಜಿತ್ ಕಡಂಬೈಲು, ಜಯ ಹಾಗೂ ರವಿ ಪೂಜಾರಿ ಪೊಲೀಸ್ ಬಲೆಗೆ ಬಿದ್ದರೆ ಬದ್ರುದ್ದೀನ್, ಸುರತ್ಕಲ್ನ ದಿಲೀಪ್ ಮತ್ತು ಮೂಡುಬಿದಿರೆಯ ರವಿ ಪೂಜಾರಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಕಡಲಕೆರೆಯ ನಿರ್ಜನ ಪ್ರದೇಶದಲ್ಲಿ ದೊಡ್ಡ ಮಟ್ಟದ ಜುಗಾರಿ ಆಟ ನಡೆಯುತ್ತಿದ್ದು ಇತ್ತ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಈ ಕುರಿತು ಮಾಹಿತಿ ಕಲೆ ಹಾಕತೊಡಗಿದಾಗ ಜುಗಾರಿ ಅಡ್ಡೆ ಪುತ್ತಿಗೆಯ ಪುಲರ್ೊಟ್ಟು ಎಂಬಲ್ಲಿಗೆ ಸ್ಥಳಾಂತರಗೊಂಡಿತರುವುದು ಗೊತ್ತಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
