ಸುದ್ದಿ9 ಮೂಡುಬಿದಿರೆ: ಅಪರೂಪದ ಪ್ರಕರಣವೆಂಬಂತೆ ಶತಾಯುಷಿಯಾಗಿದ್ದು ಗುರುವಾರ ಮೃತಪಟ್ಟಿದ್ದ ಪತಿಯನ್ನು ಒಂದೇ ದಿನದ ಅಂತರದಲ್ಲಿ ಹಿಂಬಾಲಿಸಿದಂತೆ ಶುಕ್ರವಾರ ಪತ್ನಿಯೂ ಮೃತಪಟ್ಟ ಘಟನೆ ಇಲ್ಲಿನ ಕಲ್ಲಬೆಟ್ಟು ಎಂಬಲ್ಲಿ ನಡೆದಿದೆ. ಇಲ್ಲಿನ ಕಂದಟ್ಟು ಪರಿಸರದ ಪಿಂಟೋ ನಿವಾಸಿ ಲಿಲ್ಲಿ ರೋಡ್ರಿಗಸ್(86) ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಶುಕ್ರವಾರ ಅಪರಾಹ್ನ ಮೃತಪಟ್ಟಿದ್ದಾರೆ, ಒಂದು ದಿನದ ಹಿಂದಷ್ಟೇ ಕೊಪ್ಪದಲ್ಲಿದ್ದ ಅವರ ಪತಿ ಶತಾಯುಷಿ ಅಂತೋನಿ ರೋಡಿಗ್ರಸ್ (101) ಗುರುವಾರ ಅಪರಾಹ್ನ ಮೃತಪಟ್ಟಿದ್ದರು. ಪತಿಯ ಅಗಲಿಕೆಯಿಂದ ಖಿನ್ನರಾಗಿದ್ದ ಲಿಲ್ಲಿ ಪತಿಯನ್ನು ಹಿಂಬಾಲಿಸಿ ಸಾವಲ್ಲಿ ಒಂದಾಗಿರುವುದು ಗಮನಸೆಳೆದಿದೆ. ಮೃತಪಟ್ಟಿರುವ ದಂಪತಿ ಇಬ್ಬರು ಪುತ್ರಿಯರು, ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.
000

By Suddi9

Leave a Reply

Your email address will not be published. Required fields are marked *