ಸುದ್ದಿ9 ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಯಿಂದ ಮಂಚಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದ ರಂಗೊದ ರಂಗ್ ತುಳು ರಂಗ ಕಮ್ಮಟದ ಸಮಾರೋಪ ಸಮಾರಂಭ ಬುಧವಾರ ಸಂಜೆ ಮಂಚಿಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಿ.ಎಂ.ಕುಲಾಲ್ ಸಮರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿ ಕೊಂಡಂತೆ ಪಠ್ಯದ ಕಡೆಗೂ ಹೆಚ್ಚು ಆಸಕ್ತಿ ಮೂಡುತ್ತದೆ. ಪಠ್ಯೇತರ ಚಟುವಟಿಯಲ್ಲಿ ಸಕ್ರಿಯರಾದರೆ ಓದಿನಲ್ಲಿ ಹಿಂದುಳಿಯುತ್ತೇವೆ ಎನ್ನುವ ಭ್ರಮೆಯನ್ನು ಬಿಟ್ಟು ಬಿಡಬೇಕು ಎಂದು ಕಿವಿಮಾತು ನುಡಿದರು. ಕಾನೂನಿನ ಚೌಕಟ್ಟಿನೊಳಗೆ ಸರ್ಕಾರ ಅಕಾಡೆಮಿಯ ಮೂಲಕ ನೀಡುವ ಅನುದಾನವನ್ನು ಜನ ಸಾಮಾನ್ಯರವರೆಗೂ ತಲುಪಿಸಿ ಅದು ಪ್ರಯೋಜನಕಾರಿಯಾಗುವಂತೆ ನೋಡಿಕೊಳ್ಳ ಬೇಕಿದೆ ಎಂದ ಅವರು ಅಂತರಾಷ್ಟ್ರೀಯ ಖ್ಯಾತಿಯ ನಾಟಕಕಾರ ಬಿ.ವಿ.ಕಾರಂತರ ಜನ್ಮಸ್ಥಳವಾದ ಮಂಚಿಯಲ್ಲಿ ರಂಗಕಮ್ಮಟ ಪರಿಣಾಮಕಾರಿಯಾದ ರಂಗಕಮ್ಮಟ ನಡೆದಿದೆ ಎಂದರು.
ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಇರಾ ನೇಮು ಪೂಜಾರಿ ಸಮಾರೋಪ ಭಾಷಣ ಮಾಡಿ ನಾಟಕ ರಂಗ ಇನ್ನಷ್ಟು ಬೆಳೆಯ ಬೇಕು ಆ ಮೂಲಕ ಸಮಾಜದ ಅಭಿವೃದ್ದಿಗೆ ಪೂರಕವಾದಂತಹ ವಾತವರಣ ನಿರ್ಮಾಣವಾಗಬೇಕು ಎಂದು ಆಶಯ ವ್ಯಕ್ತ ಪಡಿಸಿದರು. ಶಾಲಾಭಿವೃದ್ದಿ ಸಮಿತಿ ಸದಸ್ಯ ದಿವಾಕರ ನಾಯಕ್, ಕಮ್ಮಟದ ಸಂಪನ್ಮೂಲ ವ್ಯಕ್ತಿ ಕೃಷ್ಣಪ್ಪ ಬಂಬಿಲ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮುಖ್ಯ ಶಿಕ್ಷಕ ವಿ.ಶ್ರೀರಾಮ ಮೂರ್ತಿ ಸ್ವಾಗತಿಸಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ರಘು ಇಡ್ಕಿದು ನಿರೂಪಿಸಿದರು. ಸಹ ಶಿಬಿರ ನಿದೇರ್ಶಕ ವೆಂಕಟೇಶ್ ವಂದಿಸಿದರು. ಶಿಬಿರ ನಿದರ್ೇಶಕ ತಾರಾನಾಥ ಕೈರಂಗಳ ಸಹಕರಿಸಿದರು. ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಕಮ್ಮಟದಲ್ಲಿ ವಿದ್ಯಾರ್ಥಿಗಳು ಕಲಿತ ನಿಚ್ಚಲ ಬಲ ಓ ಚಂದಿರಾ ರಂಗ ನಾಟಕವನ್ನು ಪ್ರರ್ದಶಿಸಲಾಯಿತು. ಶಿಬಿರಾರ್ಥಿಗಳಾದ ಕೃತಿಕಾ, ಪುಷ್ಪ, ಹರಿಚರಣ್, ಹರ್ಷಿತ್ ಅನಿಸಿಕೆ ವ್ಯಕ್ತ ಪಡಿಸಿದರು. ಅಕಾಡೆಮಿ ವತಿಯಿಂದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ಡಿ.ಎಂ.ಕುಲಾಲ್ ವಿತರಿಸಿದರು.
ರಂಗೊದ ರಂಗ್ ತುಳು ರಂಗ ಕಮ್ಮಟ ಸಮಾರೋಪದಲ್ಲಿ ತುಳು ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಮಾತನಾಡಿದರು.
BTW_JAN1_1.JPG

By suddi9

Leave a Reply

Your email address will not be published. Required fields are marked *