ಮೂಡುಬಿದಿರೆ, ಡಿ. 31: ಬೃಹತ್ ಉದ್ದಿಮೆ ಸ್ಥಾಪನೆ ಸಂಬಂಧ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರ ಅನುಮತಿ ಅನಗತ್ಯ ಎಂಬ ಮೋದಿ ಸಚಿವ ಸಂಪುಟ ನಿರ್ಧರಿಸಿರುವ ಭೂಸ್ವಾಧೀನ ವಿಧೇಯಕಕ್ಕೆ ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಉದ್ದೇಶಿತ ಮಸೂದೆ ಜಾರಿಯಾದಲ್ಲಿ ಕೃಷಿ ಭೂಮಿ ಮತ್ತು ಪರಿಸರಕ್ಕೆ ಮಾರಕವಾಗುವ ಸಾಧ್ಯತೆ ಇದ್ದು, ವಿಧೇಯಕ ರೈತರು ಮತ್ತು ಪರಿಸರಗಳೆರಡಕ್ಕೂ ಮಾರಕವಾಗಲಿದೆ ಎಂದು ಸಮಿತಿ ಅಧ್ಯಕ್ಷ ಅಲ್ಪೋನ್ಸ್ ಡಿ’ಸೋಜಾ ಮತ್ತು ಸಂಚಾಲಕ ಕಿರಣ್ ಮಂಜನಬೈಲು ಭೀತಿ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರದ ಉದ್ದೇಶಿತ ಮಸೂದೆಯನ್ನು ಪಕ್ಷ ಬೇಧ ರಹಿತವಾಗಿ ವಿರೋಧಿಸಿ, ಸೂಕ್ತ ಮಾಪರ್ಾಡು ಮಾಡುವಂತೆ ಜನಪ್ರತಿನಿಧಿಗಳನ್ನು ಸಮಿತಿ ಆಗ್ರಹಿಸಿದೆ
