ತಂತ್ರಜ್ಞಾನದ ಪರಿಣಾಮಕಾರಿ ಪ್ರಸ್ತುತತೆ ಮುಖ್ಯ
ಸುದ್ದಿ9ಮೂಡುಬಿದರೆ: ತಂತ್ರಜ್ಞಾನದ ಅಧ್ಯಯನ, ಸಂಶೋಧನೆ ಬಳಿಕ ಅದರ ಪರಿಣಾಮಕಾರಿ ಪ್ರಸ್ತುತೆ ಮುಖ್ಯ ಎಂದು ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಡೀನ್ ಕಿಶೋರ್ ಶೆಟ್ಟಿ ಅಭಿಪ್ರಾಯಪಟ್ಟರು.
ಇಂಡಸ್ಟ್ರಿಯಲ್ ಡಿಜಿಟಲ್ ಡಿಸೈನ್ ವಿತ್ ವೆರಿಲೋಗ್ ಹೆಚ್.ಡಿ.ಎಲ್ ಎಂಬ ವಿಷಯದ ಕುರಿತು ಮಿಜಾರಿನ ಆಳ್ವಾಸ್ ಇಂಜಿಯರಿಂಗ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಸಂಜೆ ಸಮಾರೋಪ ಭಾಷಣ ಮಾಡಿದರು.
ವಿಜ್ಞಾನ-ತಂತ್ರಜ್ಞಾನದಲ್ಲಿ ಹೊಸ ಅನ್ವೇಷನೆಗಳು ನಡೆಯಬೇಕಾದರೆ ನಮ್ಮಲ್ಲಿರುವ ಜ್ಞಾನ, ವಿಷಯ ಒಂದರ ಕುರಿತು ನಮ್ಮಲ್ಲಿರುವ ಮಾಹಿತಿಯನ್ನು ಒನ್ನೊಬ್ಬರೊಂದಿಗೆ ವಿಚಾರ ವಿನಿಯಮಯ ಮಾಡುವ ಮೂಲಕ ವೃದ್ಧಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ತಾಂತ್ರಿಕ ಕಾರ್ಯಗಾರಗಳು ಮಹತ್ವದ ಪಾತ್ರ ವಹಿಸುತ್ತದೆ. ಶಿಕ್ಷಕರು ಇವುಗಳ ಮೂಲಕ ಸಿಗುವ ಜ್ಞಾನವನ್ನು ವಿದ್ಯಾರ್ಥಿಗಳ ಮುಂದೆ ಅರ್ಥಪೂರ್ಣವಾಗಿ ಪ್ರಸ್ತುತಪಡಿಸಬೇಕೆಂದರು.
ಮಂಗಳೂರು ಪಿ.ಎ ಕಾಲೇಜಿನ ಪ್ರೊ.ಟೆನ್ಸಿನ್ ಜೋಸ್ ಹಾಗೂ ಸಹ್ಯಾದ್ರಿ ಕಾಲೇಜಿನ ಲಕ್ಷ್ಮೀ ಶೆಟ್ಟಿ ಕಾರ್ಯಾಗಾರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾಲೇಜಿನ ತಾಂತ್ರಿಕ ವಿದ್ಯುನ್ಮಾನ ಮತ್ತು ಸಂಪರ್ಕ ವಿಭಾಗದ ಮುಖ್ಯಸ್ಥ ಪ್ರೊ.ರಾಘವೇಂದ್ರ ರಾವ್ ಸ್ವಾಗತಿಸಿದರು. ಶ್ರೀದೇವಿ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರ ಸಂಯೋಜಕ ಪ್ರೊ.ಶಂಕರ್ ವಂದಿಸಿದರು.

