ಸುದ್ದಿ9 ಮೂಡುಬಿದಿರೆ : ಅಯ್ಯಪ್ಪ ಸೇವಾ ಭಕ್ತ ವೃಂದ ಮತ್ತು ನಾಗಬ್ರಹ್ಮ ರಕ್ತೇಶ್ವರಿ ಬನ ಬಂಗಾಲಪದವು ಇದರ ಸಮಿತಿಯ ಸದಸ್ಯರಿಂದ ನಾಗಬನದ ಆವರಣದಲ್ಲಿ ಸ್ವಚ್ಚತಾ ಆಂದೋಲನ ಮತ್ತು ಶೌಚಾಲಯ ಉದ್ಘಾಟನಾ ಕಾರ್ಯಕ್ರಮವು ಆದಿತ್ಯವಾರ ನಡೆಯಿತು.
ಅಯ್ಯಪ್ಪ ಸೇವಾ ಭಕ್ತ ವೃಂದದ ಗುರು ಸ್ವಾಮಿ ಗಣೇಶ್ ಅವರು ಉದ್ಘಾಟಿಸಿದರು. ನಾಗಬ್ರಹ್ಮ ಸಮಿತಿಯ ಪುರುಷೋತ್ತಮ ರಾವ್ ಅವರು ಮಾತನಾಡಿ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಪರಿಸರದಲ್ಲಿ ಸ್ವಚ್ಛತಾ ಆಂದೋಲನವನ್ನು ಕೈಗೊಳ್ಳಲಾಗಿದೆ ಮತ್ತು ಈ ಬಂಗಾಲಪದವು ನಾಗಬನದ ಬಳಿ ಶೌಚಾಯವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಅಯ್ಯಪ್ಪ ಭಕ್ತ ವೃಂದದ ಸದಸ್ಯರು ಮತ್ತು ನಾಗಬ್ರಹ್ಮ ರಕ್ತೇಶ್ವರಿ ಬನ ಇದರ ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
30 mood swachhatha andolana (2)

30 mood swachhatha andolana (1)

By suddi9

Leave a Reply

Your email address will not be published. Required fields are marked *