ಪೊಳಲಿ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಮಹಿಳೆಯರ, ಮಕ್ಕಳ ಕಲರವ ಜೋರಾಗಿ ಕೇಳಿಬಂದಿತ್ತು. ಹಲವು ದಿನಗಳ ಮಾನಸಿಕ ಜಂಜಾಟ, ನೋವು, ದುಃಖ ಮುಂತಾದ ಜಂಜಡಗಳಿಂದ ತುಂಬಿದ್ದ ಮಹಿಳೆಯರು ಒಂದು ದಿನಪೂರ್ತಿ ಖುಷಿಯ ಅನುಭವ ಪಡೆದರು.
ಹೌದು, ಪೊಳಲಿ ರಾಮಕೃಷ್ಣ ತಪೋವನದಲ್ಲಿ ಹೆಂಗಳೆಯರಿಗೆಂದೇ ವಿವಿಧ ಕಾರ್ಯಕ್ರಮ ವಿನೋದಾವಳಿ, ಕ್ರೀಡೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಒಂದು ದಿನ ಖುಷಿಯಿಂದ ಹಲವು ಕ್ರೀಡೆಗಳಲ್ಲಿ ಉತ್ಸಾಹದಿಂದ ಮಾಲ್ಗೊಂಡ ಹೆಂಗಳೆಯರು ವಿವಿಧ ಕ್ರೀಡಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದರು.

ram1

ram2

ram3

ram4

ram5

ram6

ram7

ram8

ram9

ram10

ram11

ram12

ram13

ram14

 

 

 

images
ಕಾರ್ಯಕ್ರಮ ಉದ್ದೇಶವೇನು?
ಅಷ್ಟಕ್ಕೂ ಈ ಕಾರ್ಯಕ್ರಮಕ್ಕೆ ಉದ್ದೇಶವೂ ಇದೆ. ಈ ಕಾರ್ಯಕ್ರಮವನ್ನು ಆಯೋಜಿಸಿದವರು ಪೊಳಲಿ ರಾಮಕೃಷ್ಣ ತಪೋವನದ ಚೈತನ್ಯಾನಂದ ಸ್ವಾಮೀಜಿ. ಮಾತೆ ಶಾರದಾ ದೇವಿಯ ಭಕ್ತರಾಗಿರುವ ಅವರು ದೇವಿಯ ಸಾತ್ವಿಕ ಲಹರಿಗಳು ಮಹಿಳೆಯರಲ್ಲಿ ಪ್ರಕ್ಷೇಪಗೊಳ್ಳಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದರು. ಈ ಕಾರ್ಯಕ್ರಮದಲ್ಲಿ ಧಾಮರ್ಿಕ ಲೇಪನವೂ ಇತ್ತು. ಕ್ರೀಡೆಯ ಜೊತೆ ಸಾತ್ವಿಕ ಭಕ್ತಿ ಅನಾವರಣ ಮಾಡಲಾಯಿತು.

By suddi9

Leave a Reply

Your email address will not be published. Required fields are marked *