ಬಂಟ್ವಾಳ : ತಾಲೂಕು ಕಾವಳಪಡೂರು ವಗ್ಗ ಸ.ಪ.ಪೂ.ಕಾಲೇಜು ಮತ್ತು ಸ.ಪ್ರೌ.ಶಾಲೆಯಲ್ಲಿ ಜೆ.ಬಿ.ಎಫ್. ಪೆಟ್ರೋಕೆಮಿಕಲ್ಸ್ (ಲಿ) ಮಂಗಳೂರು ಇವರು ಕೊಡುಗೆಯಾಗಿ ನೀಡಿದ ಆವರಣಗೋಡೆ ಮತ್ತು ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಡಿ.26ರಂದು ಜರಗಿತು.
pkt1
ಮಂಗಳೂರಿನ ಜೆ.ಬಿ.ಎಫ್. ಪೆಟ್ರೋಕೆಮಿಕಲ್ಸ್ (ಲಿ) ಇದರ ಸಿ.ಇ.ಒ. ಮತ್ತು ನಿದರ್ೆಶಕ ಅಳಿಕೆ ಗೋಪಾಲಕೃಷ್ಣ ಪೈ ಅವರು ಆವರಣ ಗೋಡೆ ಉದ್ಘಾಟಿಸಿದರು. ಇದೇ ವೇಳೆ ಇತರ ಯೋಜನೆಗಳಾದ ಶಾಲೆಯ ಪ್ರವೇಶದ್ವಾರ, ನವೀಕೃತ ಶೌಚಾಲಯ, ಸಿ.ಸಿ.ಕ್ಯಾಮರಾ ಅಳವಡಿಕೆ, ಸರಕಾರದಿಂದ ಕೊಡಮಾಡಿದ ಉಚಿತ ಸೈಕಲ್ ವಿತರಣೆ, ಅಹಮದ್ ತಾಹ ತನ್ವೀರ್ ಅವರು ಕೊಡಮಾಡಿದ ಕುಡಿಯುವ ನೀರಿನ ಕೂಲರ್ ಇದರ ಉದ್ಘಾಟನೆ ನಡೆಯಿತು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಂಘದ ಕಾಯರ್ಾಧ್ಯಕ್ಷ ಪಿ.ಜಿನರಾಜ ಆರಿಗ ಅವರು ಅಧ್ಯಕ್ಷತೆ ವಹಿಸಿದ್ದರು. ಕಾವಳಪಡೂರು ಗ್ರಾ.ಪಂ.ಪ್ರಭಾರ ಅಧ್ಯಕ್ಷ ಅಬ್ದುಲ್ ರಝಾಕ್, ಗ್ರಾ.ಪಂ.ಸದಸ್ಯ ಮಾಣಿಕ್ಯರಾಜ್ ಜೈನ್, ಪ್ರಮುಖರಾದ ಧನಂಜಯ ಹೆಗ್ಡೆ ಪಚ್ಚಾಜೆ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಉಪನ್ಯಾಸಕ ವೃಂದ, ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ವಿನೋದಾವಳಿ ಕಾರ್ಯಕ್ರಮ ನಡೆಯಿತು.
ಶಾಲಾಭಿವೃದ್ಧಿ ಸಂಘದ ಕಾಯರ್ಾಧ್ಯಕ್ಷ ಪಿ.ಜಿನರಾಜ ಆರಿಗ ಅವರು ಸ್ವಾಗತಿಸಿದರು. ಶಾಲಾ ಮುಖ್ಯಶಿಕ್ಷಕ ಶೇಖ್ ಆದಂ ಸಾಹೇಬ್ ವಂದಿಸಿದರು. ಶಿಕ್ಷಕಿ ಲೈಲಾ ಪವರ್ಿನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *