asaramಅಹ್ಮದಾಬಾದ್: ವಿವಾದಿತ ದೇವಮಾನವ ಅಸಾರಾಂ ಬಾಪು ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿದ್ದ 33 ವರ್ಷದ ಮಹಿಳೆಯ ಕುಟುಂಬ ನಾಪತ್ತೆಯಾಗಿದೆ ಎಂಬ ಸುದ್ದಿಗೆ ತೆರೆಬಿದ್ದಿದೆ. ಮಹಿಳೆಯ ಕುಟುಂಬ ಎಲ್ಲೂ ನಾಪತ್ತೆಯಾಗಿಲ್ಲ, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಕಾರಣಾಂತರಗಳಿಂದ ಅಡಗಿಕೊಂಡಿದ್ದಾರೆ ಎಂದು ಅವರ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ.

ಗುಜರಾತ್ ಸರ್ಕಾರ ಈ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಿದ್ದರೂ ಅವರು ಬಚ್ಚಿಟ್ಟುಕೊಳ್ಳುವ ಅಗತ್ಯವೇನು ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ವಕೀಲರು, ಪೊಲೀಸ್ ಭದ್ರತೆಯನ್ನ ಪಡೆದುಕೊಳ್ಳದಿರುವ ಆಯ್ಕೆಯೂ ಆ ಮಹಿಳೆಯ ಕುಟುಂಬಕ್ಕಿದೆ ಎಂದು ವಾದಿಸಿದ್ದಾರೆ.

33 ವರ್ಷದ ಮಹಿಳೆ ಹಾಗೂ ಆಕೆಯ ಪತಿ ಮತ್ತು ಮಗ ಇವರು ವಾರದ ಹಿಂದೆ ಯಾವುದೋ ಮದುವೆ ಇದೆ ಎಂದು ಹೋದವರು ಮತ್ತೆ ವಾಪಸ್ಸಾಗಿರಲಿಲ್ಲ. ಅವರ ನಾಪತ್ತೆ ವಿಷಯವಾಗಿ ಅನೇಕ ಊಹಾಪೋಹಗಳೆದ್ದಿದ್ದವು.

By suddi9

Leave a Reply

Your email address will not be published. Required fields are marked *