ಬಂಟ್ವಾಳ: ತಾಲೂಕು ಸಿದ್ಧಕಟ್ಟೆ , ಸಂಗಬೆಟ್ಟು ಪಣಂಬೂರು ಶ್ರೀ ವೀರಭದ್ರ ಸ್ವಾಮೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಧರ್ಮಧಿಕಾರಿ ಡಾ|ವೀರೇಂದ್ರ ಹೆಗ್ಗಡೆ ಅವರು ಕೊಡಮಾಡಿದ 10 ಲಕ್ಷ ರೂ.ಸಹಾಯಧನದ ವಿತರಣಾ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ಜರಗಿತು.

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಬಂಟ್ವಾಳ ಯೋಜನಾಕಾರಿ ಕು|ಸುನೀತಾ ನಾಯಕ್ ಅವರು ಸಹಾಯಧನದ ಚೆಕ್ಕನ್ನು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪುರುಷೋತ್ತಮ ಗುರಿಕಾರ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಿದ್ಧಕಟ್ಟೆ ವಲಯ ಮೇಲ್ವಿಚಾರಕ ವಿನಾಯಕ ಗುನಗ, ಒಕ್ಕೂಟ ಅಧ್ಯಕ್ಷ ಅಶೋಕ ಜೈನ್, ಸೇವಾಪ್ರತಿನಿ ಜಯಾನಂದ, ಪ್ರಮುಖರಾದ ಗಂಗಾಧರ ಗುರಿಕಾರ, ಮಹಾಬಲ ಗುರಿಕಾರ, ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ್, ಕಾರ್ಯಧ್ಯಕ್ಷ ವಾಮನ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಟ್ಟಿಗಾರ್, ಉಪಾಧ್ಯಕ್ಷರಾದ ನೋಣಯ ಶೆಟ್ಟಿಗಾರ್ ಕೊಯಿಲ, ದೇವಪ್ಪ ಶೆಟ್ಟಿಗಾರ್ ಕೊಣಾಜೆ, ನೋಣಯ ಶೆಟ್ಟಿಗಾರ್ ಸಿದ್ಧಕಟ್ಟೆ , ಮಾಧವ ಶೆಟ್ಟಿಗಾರ್, ಕೃಷ್ಣಯ ಆಚಾರ್ಯ, ದಿನೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
