ಮೂಡುಬಿದರೆ: ಕಲ್ಲಬೆಟ್ಟುವಿನ ಎಕ್ಸಲೆಂಟ್ ಪ.ಪೂ. ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿ ಗಳಿಗಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಇಂಗ್ಲೀಷ್ ಚರ್ಚಾ ಸ್ಪರ್ಧೆ  ರೊಟೆಕ್ಸ್ ಡಿಬೆಟ್ 2014 ಇತ್ತೀಚೆಗೆ ನಡೆಯಿತು.

26-
ಮಂಗಳೂರು ಶಾರದಾ ವಿದ್ಯಾಲಯದ ಸಂಜನಾ ಮತ್ತು ಶಿಫಾಲ್ ಸುಧೀರ್ ಪ್ರಥಮ ಸ್ಥಾನ ಪಡೆದರು. ಉಜಿರೆ ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆಯ ದೀಕ್ಷಾ ಮತ್ತು ಅಲ್ಫಾ ಮರಿಯಾ ಥೋಮ್ ದ್ವಿತೀಯ ಸ್ಥಾನ ಹಾಗೂ ಮಂಗಳೂರು ಶಾರದಾ ವಿದ್ಯಾಲಯದ ಸೌರಭ್ ಮತ್ತು ಶ್ರೇಯಾ ಭಟ್ ತೃತೀಯ ಸ್ಥಾನ ಪಡೆದಿದ್ದಾರೆ.
ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ  ರಶ್ಮಿತಾ ಜೈನ್, ಆಡಳಿತಾಧಿಕಾರಿ ಡಾ. ಶ್ರುತಕೀರ್ತಿರಾಜ, ಪ್ರಾಂಶುಪಾಲ ಕೆ.ಎಸ್. ನಾಗೇಶ್ ವಿಜೇತರಿಗೆ ಬಹುಮಾನ ವಿತರಿಸಿದರು.
ರೋಟರಿ ಕ್ಲಬ್ ಆಫ್ ಮೂಡುಬಿದರೆ ಟೆಂಪಲ್ಟೌನ್ ಮತ್ತು ಎಕ್ಸಲೆಂಟ್ ಕಾಲೇಜಿನ ಜಂಟಿ ಆಶ್ರಯದಲ್ಲಿ ಸ್ಪಧರ್ೆ ಏರ್ಪಡಿಸಲಾಗಿತ್ತು. ಮಂಗಳೂರು ಸಿಐಎಲ್ ಕೇಂದ್ರದ ಸಹಕಾರ ನೀಡಿತ್ತು. ಉಭಯ ಜಿಲ್ಲೆಗಳ 40 ತಂಡಗಳು ಭಾಗವಹಿಸಿದ್ದವು.
ಮಡಿಕೇರಿ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ನಾಲ್ಕೂ ಜಿಲ್ಲೆಗಳ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿ ವಿಜೇತರು 2015 ನೇ ಜನವರಿ 2 ರಂದು ಎಕ್ಸಲೆಂಟ್ ಕಾಲೇಜಿನಲ್ಲಿ ನಡೆಯುವ `ಮೆಗಾ-ಫಿನಾಲೆ’ಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪತ್ರಿಕೆಗೆ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *