ಮೂಡುಬಿದಿರೆ : ಕರ್ನಾ ಟಕ ರಾಜ್ಯ ಸರಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ವಾಪಾಸ್ ಪಡೆದ ಹಾಗೂ ಮಠ ಮಂದಿರಗಳನ್ನು ವಶಪಡಿಸಲು ಪ್ರಯತ್ನಿಸುವ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಪ್ರತಿಭಟಿಸಿ ಮೂಡುಬಿದಿರೆಯ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಇಲ್ಲಿನ ಬಸ್ ನಿಲ್ದಾಣದ ಬಳಿ ಪ್ರತಿಭಟನಾ ಧರಣಿ ಶುಕ್ರವಾರ ಸಂಜೆ ನಡೆಯಿತು.

26-1

ಪ್ರಾಂತ ಗೋರಕ್ಷಕ್ ಪ್ರಮುಖ್ ದಿನೇಶ್ ಪೈ ಪ್ರತಿಭಟನಾ ಧರಣಿಯನ್ನುದ್ದೇಶಿಸಿ ಮಾತನಾಡಿ ಚುನಾವಣಾ ಸಂದರ್ಭದಲ್ಲಿ ಬಹು ಸಂಖ್ಯಾತರನ್ನು ಓಲೈಸಿ ಮತಗಳನ್ನು ಪಡೆದು ಅಧಿಕಾರಕ್ಕೆ ಬರುವ ತನಕ ಗೋಹತ್ಯೆ ಮಸೂದೆಯನ್ನು ಹಿಂಪಡೆಯುವ ಸೂಚನೆಯನ್ನು ಸಿದ್ಧರಾಮಯ್ಯನವರು ನೀಡಿಲ್ಲ. ಬಹು ಸಂಖ್ಯಾತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಬಹುಸಂಖ್ಯಾತರನ್ನು ಕಡೆಗಣಿಸಿದೆಯಲ್ಲದೆ ಪ್ರಜಾಪ್ರಭುತ್ವಕ್ಕೆ ವಿರೋಧವನ್ನು ಮಾಡಿದೆ ಮತ್ತು ದೇಶ ದ್ರೋಹಿ ಕೆಲಸಗಳನ್ನು ಮಾಡಿದೆ.

ಜಿಲ್ಲೆಯಲ್ಲಿ ಗೋಕಳ್ಳತನ, ಗೋಹತ್ಯೆ ಮತ್ತು ಅನಾಚಾರಗಳು ಹೆಚ್ಚಾಗಲು ಕಾಂಗ್ರೆಸ್ನ ಶಾಸಕರಾದ ಮೊಯಿದ್ದೀನ್ ಬಾವಾ, ಜೆ.ಆರ್.ಲೋಬೋ, ಯು.ಟಿ.ಖಾದರ್ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್  ಇವರೆಲ್ಲರೂ ಕಾರಣಕರ್ತರು ಎಂದು ಆರೋಪಿದ ಅವರು ಈ ಎಲ್ಲಾ ಅನಾಚಾರಗಳ ಹೊಣೆಗಳನ್ನು ಹೊತ್ತಿರುವ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಕೂಡಲೇ ರಾಜಿನಾಮೆಯನ್ನು ನೀಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಬಿಜೆಪಿ ಮುಖಂಡ ಸುದರ್ಶನ್, ವಿ.ಹಿಂ.ಪ ದ ಕಾರ್ಯಧ್ಯಕ್ಷ ಶ್ಯಾಮ ಹೆಗ್ಡೆ, ಬಜರಂಗದಳದ ತಾಲೂಕು ಸಂಚಾಲಕ ಸೋಮನಾಥ ಕೋಟ್ಯಾನ್ ಧರಣಿಯನನುದ್ದೇಶಿಸಿ ಮಾತನಾಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ಬಜರಂಗದಳದ ಸಹ ಸಂಚಾಲಕ ಸಂತೋಷ್, ಉಪಾಧ್ಯಕ್ಷ ಪ್ರಸಾದ್ ಆಳ್ವ ಸಹಿತ ಕಾರ್ಯಕರ್ತರು ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದರು.

By suddi9